alex Certify
ಕನ್ನಡ ದುನಿಯಾ       Mobile App
       

Kannada Duniya

ಮಹಿಳಾ ನಾಗ ಸಾಧುಗಳಿಗೆ ಸುಲಭವಾಗಿ ಸಿಗಲ್ಲ ದೀಕ್ಷೆ

women-naga-sadhu

ನಾಗ ಸಾಧುಗಳ ರಹಸ್ಯಮಯ ಬದುಕಿನ ಬಗ್ಗೆ ನೀವು ಕೇಳಿರುತ್ತೀರಾ. ಹಾಗೆ ಮಹಿಳಾ ನಾಗಸಾಧುಗಳ ಜಗತ್ತು ಕೂಡ ಬಹಳ ವಿಶೇಷತೆಗಳಿಂದ ಕೂಡಿದೆ. ಆದ್ರೆ ಅನೇಕರಿಗೆ ಮಹಿಳಾ ನಾಗ ಸಾಧುಗಳ ಅಸ್ತಿತ್ವದ ಬಗ್ಗೆ ತಿಳಿದಿಲ್ಲ. ಮಹಿಳಾ ನಾಗ ಸಾಧುಗಳು ದೀಕ್ಷೆ ಪಡೆಯೋದು ಹೇಗೆ? ಅವರ ಜಗತ್ತು ಹೇಗಿರುತ್ತದೆ ನೋಡೋಣ ಬನ್ನಿ.

ಮಹಿಳಾ ನಾಗ ಸಾಧುಗಳು ದೀಕ್ಷೆ ಪಡೆಯಬೇಕಾದರೆ 6-12 ವರ್ಷಗಳ ಕಾಲ ಬ್ರಹ್ಮಚರ್ಯ ಪಾಲಿಸಬೇಕಾಗುತ್ತದೆ. ಇದರ ನಂತ್ರ ಅವರು ಮುಂದೂ ಬ್ರಹ್ಮಚರ್ಯ ಪಾಲಿಸ್ತಾರೆ ಎಂಬ ಭರವಸೆ ಬಂದ ನಂತ್ರ ಗುರು, ಶಿಷ್ಯರಿಗೆ ದೀಕ್ಷೆ ನೀಡುತ್ತಾರೆ.

ಮಹಿಳಾ ಸಾಧುವಾಗುವ ಮುನ್ನ ಅವರ ತಂದೆ-ತಾಯಿ, ಹಿಂದಿನ ಜೀವನ, ಮನೆತನದ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತದೆ.

ಮಹಿಳೆ ಸನ್ಯಾಸಿನಿಯಾಗುವ ಮೊದಲು ಆಕೆ ಮುಡಿ ಕೊಡಬೇಕು. ನಂತ್ರ ನದಿಯಲ್ಲಿ ಸ್ನಾನ ಮಾಡಬೇಕಾಗುತ್ತದೆ.

ಮಹಿಳಾ ನಾಗ ಸಾಧುಗಳು ಇಡೀ ದಿನ ದೇವರ ಧ್ಯಾನ ಮಾಡ್ತಾರೆ. ಬೆಳಿಗ್ಗೆ ಬ್ರಹ್ಮ ಮುಹೂರ್ತದಲ್ಲಿ ಎದ್ದೇಳಬೇಕಾಗುತ್ತದೆ. ನಿತ್ಯ ಕರ್ಮದ ನಂತರ ಶಿವಾಜಿಯ ಜಪ ಮಾಡುತ್ತಾರೆ. ಊಟ ಮಾಡಿದ ನಂತರವೂ ಶಿವಾಜಿ ಜಪ ಮಾಡಬೇಕಾಗುತ್ತದೆ. ಸಂಜೆ ದತ್ತಾತ್ರೆಯ ದೇವರ ಪೂಜೆ ಮಾಡಿದ ಮೇಲೆ ಮಲಗುತ್ತಾರೆ.

ನಾಗ ಸನ್ಯಾಸಿಗಳ ಜೊತೆಯಲ್ಲಿಯೇ ಮಹಿಳಾ ಸನ್ಯಾಸಿಗಳು ಸ್ನಾನ ಮಾಡುತ್ತಾರೆ. ಅಲ್ಲಿ ಮಹಿಳೆ ಎಂದು ಬೇಧ ಮಾಡಲಾಗುವುದಿಲ್ಲ.

ಸನ್ಯಾಸಿ ದೀಕ್ಷೆ ಸಿಕ್ಕ ನಂತರ ಎಲ್ಲರೂ ಅವರನ್ನು ಮಾತಾ ಎಂದು ಕರೆಯುತ್ತಾರೆ.

ಸನ್ಯಾಸತ್ವ ಸ್ವೀಕರಿಸುವ ಮುನ್ನ, ಕುಟುಂಬ ಹಾಗೂ ಸಮಾಜದ ಬಗ್ಗೆ ಮೋಹವಿಲ್ಲ ಎಂಬುದನ್ನು ಸ್ಪಷ್ಟಪಡಿಸಬೇಕಾಗುತ್ತದೆ. ಇದರಿಂದ ಸಂತುಷ್ಠರಾದಲ್ಲಿ ಮಾತ್ರ ದೀಕ್ಷೆ ಸಿಗುತ್ತದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...