alex Certify
ಕನ್ನಡ ದುನಿಯಾ       Mobile App
       

Kannada Duniya

ದೆವ್ವದ ಹೆಸರಲ್ಲಿ ಮಹಿಳೆಗೆ ಚಿತ್ರ ಹಿಂಸೆ

shoe water

ಭಿಲ್ವಾರಾ: ದೇವರ ಹರಕೆ ತೀರಿಸುವ ಮೂಢ ನಂಬಿಕೆಗೆ ಬಲಿಯಾಗಿ ಯುವತಿಯೊಬ್ಬಳು ನಾಲಿಗೆಯನ್ನೇ ಕೊಯ್ದುಕೊಂಡಿದ್ದು, ಇತ್ತೀಚೆಗಷ್ಟೇ ಸುದ್ದಿಯಾಗಿತ್ತು. ಅದೇ ರೀತಿ ಮೂಢ ನಂಬಿಕೆಯಿಂದ ಮಹಿಳೆಗೆ ಚಿತ್ರ ಹಿಂಸೆ ನೀಡಿದ ಘಟನೆ ನಡೆದಿದೆ.

ದೆವ್ವ, ಪಿಶಾಚಿ ಮೈಮೇಲೆ ಸೇರಿಕೊಂಡಿದೆ ಎಂದು ಮಹಿಳೆಯೊಬ್ಬಳಿಗೆ ಚಿತ್ರ ಹಿಂಸೆ ನೀಡಿದ ಘಟನೆ ರಾಜಸ್ತಾನದ ಭಿಲ್ವಾರಾದಲ್ಲಿ ನಡೆದಿದೆ. ದೆವ್ವ ಮೈಮೇಲೆ ಸೇರಿಕೊಂಡಿದೆ ಎಂದು ದೇವಾಲಯಕ್ಕೆ ಮಹಿಳೆಯೊಬ್ಬಳನ್ನು ಕರೆದುಕೊಂಡು ಬಂದ ಕಿರಾತಕರು, ಶೂನಲ್ಲಿ ನೀರು ಹಾಕಿ ಮಹಿಳೆಗೆ ಕುಡಿಸಿದ್ದಾರೆ. ಅಲ್ಲದೇ, ಆಕೆಯ ತಲೆ ಮೇಲೆ ಶೂ ಇಟ್ಟು ವಿಲಕ್ಷಣವಾಗಿ ವರ್ತಿಸಿದ್ದು, ಆಕೆಗೆ ಹಿಂಸೆ ನೀಡಿದ್ದಾರೆ. ಮೂಢ ನಂಬಿಕೆಯಿಂದ ಹೀಗೆಲ್ಲಾ ಮಾಡಲಾಗಿದೆ ಎಂದು ಹೇಳಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ವಶಕ್ಕೆ ಪಡೆದಿರುವ ಪೊಲೀಸರು, ದೆವ್ವದ ಹೆಸರಲ್ಲಿ ಮುಗ್ಧರಿಗೆ ಹಿಂಸೆ ನೀಡಿದಲ್ಲಿ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ. ದೇವಾಲಯಕ್ಕೆ ಪೊಲೀಸ್ ಕಾವಲು ಹಾಕಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...