alex Certify
ಕನ್ನಡ ದುನಿಯಾ       Mobile App
       

Kannada Duniya

ವಿತ್ತ ಸಚಿವ ಸೇರಿ 790 ಸದಸ್ಯರಿಗೆ ಸ್ಯಾನಿಟರಿ ಪ್ಯಾಡ್ ರವಾನೆ

ಮಹಿಳೆಯರ ಅತ್ಯಗತ್ಯ ವಸ್ತುಗಳ ಪಟ್ಟಿಯಲ್ಲಿ ಸ್ಯಾನಿಟರಿ ಪ್ಯಾಡ್ ಕೂಡ ಒಂದು. ಸ್ಯಾನಿಟರಿ ಪ್ಯಾಡ್ ಮೇಲಿನ ಜಿಎಸ್ ಟಿ ಕಡಿಮೆ ಮಾಡುವಂತೆ ಒತ್ತಾಯಿಸಿ ಸಾಮಾಜಿಕ ಜಾಲತಾಣ ಸೇರಿದಂತೆ ಎಲ್ಲೆಡೆ ಪ್ರತಿಭಟನೆ ಕೂಗು ಕೇಳಿಸುತ್ತಿದೆ. ಈಗ ರಾಯ್ಪುರದ ಯುವ ಕಾಂಗ್ರೆಸ್ ವಿನೂತನ ಪ್ರತಿಭಟನೆಗಿಳಿದಿದೆ.

ಯುವ ಜನತಾ ಕಾಂಗ್ರೆಸ್ ಛತ್ತೀಸಗಢ (ಜೆ) ಕೇಂದ್ರ ಸಚಿವರಿಗೆ ಸ್ಯಾನಿಟರಿ ಪ್ಯಾಡ್ ಕಳುಹಿಸಿ ವಿನೂತನ ಪ್ರತಿಭಟನೆ ನಡೆಸಲು ಮುಂದಾಗಿದೆ. ಸಂಸತ್ತಿನ 790 ಸದಸ್ಯರಿಗೆ ಸ್ಯಾನಿಟರಿ ಪ್ಯಾಡ್ ಕಳುಹಿಸಲಿದೆ. ಅಂಚೆ ಮೂಲಕ ಕೇಂದ್ರದ ಹಣಕಾಸು ಸಚಿವರು ಸೇರಿದಂತೆ ಎಲ್ಲ 790 ಸದಸ್ಯರಿಗೆ ಸ್ಯಾನಿಟರಿ ಪ್ಯಾಡ್ ಕಳುಹಿಸುವುದಾಗಿ ಸಂಘಟನೆ ಹೇಳಿದೆ.

ಕೇಂದ್ರ ಸರ್ಕಾರ ಸ್ಯಾನಿಟರಿ ಪ್ಯಾಡನ್ನು ಐಷಾರಾಮಿ ನೈರ್ಮಲ್ಯ ವಸ್ತುಗಳ ಪಟ್ಟಿಗೆ ಸೇರಿಸಿದೆ. ಇದ್ರಿಂದ ಶೇಕಡಾ 12ರಷ್ಟು ತೆರಿಗೆ ಬೀಳ್ತಿದೆ. ಇದು ಜನಸಾಮಾನ್ಯರಿಗೆ ದುಬಾರಿಯಾಗಲಿದೆ. ಗ್ರಾಮೀಣ ಕ್ಷೇತ್ರದ ಮಹಿಳೆಯರು ಇದನ್ನು ಖರೀದಿ ಮಾಡುವುದು ಕಷ್ಟವೆಂಬುದು ಯುವ ಕಾಂಗ್ರೆಸ್ ವಾದವಾಗಿದೆ.

ಎಲ್ಲ ಸದಸ್ಯರಿಗೆ ನವೆಂಬರ್ 23ರಂದು ಸ್ಪೀಡ್ ಫೋಸ್ಟ್ ಮೂಲಕ ಪ್ಯಾಡ್ ರವಾನೆ ಮಾಡಲಾಗುವುದು. ಇದಕ್ಕೆ ಸರಿಯಾದ ಉತ್ತರ ಸಿಗದಿದ್ದಲ್ಲಿ ಪ್ರತಿಭಟನೆ ಶುರುಮಾಡುವುದಾಗಿ ಕಾಂಗ್ರೆಸ್ ಎಚ್ಚರಿಕೆ ನೀಡಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...