alex Certify
ಕನ್ನಡ ದುನಿಯಾ       Mobile App
       

Kannada Duniya

ಹೆಣ್ಣು ಮಗು ಜನಿಸಿದ್ರೆ ಇಲ್ಲಿ ಎಲ್ಲವೂ ಫ್ರೀ

gujarat

ಭಾರತ ಎಷ್ಟೇ ಮುಂದುವರೆದಿದ್ದರೂ ಹೆಣ್ಣು- ಗಂಡಿನ ಭೇದ ಭಾವ ಇನ್ನೂ ಮುಂದುವರೆದಿದೆ. ಹೆಣ್ಣು ಭ್ರೂಣ ಹತ್ಯೆಯ ಜೊತೆ ಜೊತೆಗೆ ಹೆಣ್ಣು ಮಗು ಜನಿಸಿದ ನಂತ್ರ ಚರಂಡಿಗೆ ಎಸೆದು ಹೋಗುವ ಪಾಲಕರು ನಮ್ಮಲ್ಲಿದ್ದಾರೆ. ಅಹಮದಾಬಾದ್ ನಲ್ಲಿ ಲಿಂಗಾನುಪಾತದಲ್ಲಿ ಭಾರೀ ಅಂತರ ಕಾಣಿಸುತ್ತಿದೆ. 1000 ಗಂಡು ಮಕ್ಕಳಿಗೆ 890 ಹುಡುಗಿಯರಿದ್ದಾರೆ.

ಹೆಣ್ಣು ಮಕ್ಕಳ ರಕ್ಷಣೆಗೆ ಅಹಮದಾಬಾದ್ ಆಸ್ಪತ್ರೆಯೊಂದು ಮುಂದಾಗಿದೆ. ಸುಮಾರು 30 ವರ್ಷಗಳ ಹಳೆಯದಾದ ಸಿಂಧು ಸೇವಾ ಸಮಾಜದ ಆಸ್ಪತ್ರೆ ಹೆಣ್ಣು ಮಕ್ಕಳು ಜನಿಸಿದ್ರೆ ಪಾಲಕರಿಂದ ಯಾವುದೇ ಫೀ ಪಡೆಯುತ್ತಿಲ್ಲ. ಕಳೆದ ಒಂದು ತಿಂಗಳಿಂದ ಈ ಸೇವೆಯನ್ನು ಆಸ್ಪತ್ರೆ ಜಾರಿಗೆ ತಂದಿದೆ.

ಈವರೆಗೆ 150 ಜೋಡಿ ಆಸ್ಪತ್ರೆಯಲ್ಲಿ ಹೆಸರು ನೋಂದಾಯಿಸಿದ್ದಾರೆ. ನಾರ್ಮಲ್ ಡಿಲೆವರಿಗೆ 7 ಸಾವಿರ ಹಾಗೂ ಸರ್ಜರಿಗೆ 20 ಸಾವಿರ ಜಾರ್ಜ್ ಮಾಡುತ್ತದೆ ಆಸ್ಪತ್ರೆ. ಸಿಂಧೂ ಆಸ್ಪತ್ರೆಗೆ ಬರುವ ಗರ್ಭಿಣಿಯರು ಗಂಡು ಮಗು ಜನಿಸಲೆಂದು ಪ್ರಾರ್ಥಿಸುತ್ತಾರಂತೆ. ಗಂಡು ಮಗು ಜನಿಸಿದ್ರೆ ಇಡೀ ಆಸ್ಪತ್ರೆಗೆ ಸಿಹಿ ಹಂಚುತ್ತಾರಂತೆ. ಅದೇ ಹೆಣ್ಣು ಮಗು ಜನಿಸಿದ್ರೆ ಅವರು ಖುಷಿ ಪಡುವುದಿಲ್ಲ. ಹೆಣ್ಣ ಮಗು ಹುಟ್ಟಿದಾಗಲೂ ಸಂತೋಷಪಡಲಿ, ಹೆಣ್ಣು ಮಕ್ಕಳನ್ನು ಪ್ರೀತಿಸಲಿ ಎನ್ನುವ ಕಾರಣಕ್ಕೆ ಎಲ್ಲ ಸೇವೆಯನ್ನು ಉಚಿತವಾಗಿ ನೀಡುತ್ತಿರುವುದಾಗಿ ಆಸ್ಪತ್ರೆ ಎಂ.ಡಿ. ಮಹದೇವ್ ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...