alex Certify
ಕನ್ನಡ ದುನಿಯಾ       Mobile App
       

Kannada Duniya

ಆರ್.ಟಿ.ಐ. ಮಾಹಿತಿಯಲ್ಲಿ ಬಯಲಾಯ್ತು ಸರ್ಕಾರಿ ಇಲಾಖೆ ಮಾಡಿದ್ದ ಎಡವಟ್ಟು

ಕೇಂದ್ರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ನಡೆದಿದ್ದ ಮಹಾ ಪ್ರಮಾದ ಒಂದು ಆರ್.ಟಿ.ಐ. ಮೂಲಕ ಬಯಲಾಗಿದೆ. ಪ್ರಧಾನ್ ಮಂತ್ರಿ ಮಾತೃ ವಂದನಾ ಯೋಜನೆಯ ಅಡಿಯಲ್ಲಿ ದಾಖಲಾಗಿದ್ದ ಮಹಿಳೆಯರ ಅಂಕಿ-ಅಂಶಗಳು ತಪ್ಪಾದ ವಿಚಾರ ಆರ್.ಟಿ.ಐ. ಅರ್ಜಿಯ ಮೂಲಕವೇ ಇಲಾಖೆಯ ಗಮನಕ್ಕೆ ಬಂದಿದೆ.

ಪ್ರಸಕ್ತ ವರ್ಷದಲ್ಲಿ ಅಂದ್ರೆ 2018 ರ ಆಗಸ್ಟ್ 27ರವರೆಗೆ ಮಾತೃ ವಂದನಾ ಯೋಜನೆಗೆ ಸೇರ್ಪಡೆಯಾಗಿರುವ ಮಹಿಳೆಯರ ಸಂಖ್ಯೆ ಆರು ಲಕ್ಷಕ್ಕೂ ಅಧಿಕ. ಇವರಲ್ಲಿ ಈಗಾಗ್ಲೇ ಮೂರು ಲಕ್ಷಕ್ಕೂ ಅಧಿಕ ಮಂದಿ ಯೋಜನೆಯ ಪ್ರಯೋಜನ ಪಡೆಯುತ್ತಿದ್ದಾರೆ.

ಆದ್ರೆ ಆರ್.ಟಿ.ಐ. ಮೂಲಕ ಯೋಜನೆಯ ಪ್ರಯೋಜನ ಪಡೆಯುತ್ತಿರುವವರ ಮಾಹಿತಿ ಕೇಳಿದಾಗ ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ತಪ್ಪಾದ ಮಾಹಿತಿಯನ್ನು ನೀಡಿತ್ತು. ಕೇವಲ 184 ಮಂದಿಯಷ್ಟೇ ಈ ಯೋಜನೆಯ ಅಡಿಯಲ್ಲಿ ಪ್ರಯೋಜನ ಪಡೆಯುತ್ತಿದ್ದಾರೆ ಎಂಬ ಉತ್ತರ ಬಂದಿತ್ತು.

ಈ ಅಂಕಿ ಅಂಶದ ಬಗ್ಗೆ ಅನುಮಾನಗೊಂಡ ಕಾರ್ಯಕರ್ತ ಮತ್ತೊಂದು ಆರ್.ಟಿ.ಐ. ಅರ್ಜಿಯನ್ನು ದಾಖಲು ಮಾಡಿ ರಾಜ್ಯವಾರು ಮಾಹಿತಿ ಕೇಳಿದಾಗ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ತಾನು ಮಾಡಿದ್ದ ತಪ್ಪಿನ ಅರಿವಾಗಿದೆ.

ಸದ್ಯಕ್ಕೆ ಆರ್.ಟಿ.ಐ.ನಲ್ಲಿ ನೀಡಲಾಗಿರುವ ಮಾಹಿತಿಯ ಪ್ರಕಾರ 29 ರಾಜ್ಯಗಳ 717 ಜಿಲ್ಲೆಗಳಿಂದ ಸುಮಾರು 44 ಲಕ್ಷ ಮಹಿಳೆಯರು ಮಾತೃ ವಂದನಾ ಕಾರ್ಯಕ್ರಮದ ಅಡಿಯಲ್ಲಿ ಗುರುತಿಸಿಕೊಂಡಿದ್ದು, ಇದರಲ್ಲಿ 37 ಲಕ್ಷಕ್ಕೂ ಅಧಿಕ ಮಹಿಳೆಯರು ಯೋಜನೆಯ ಪ್ರಯೋಜನ ಪಡೆಯುತ್ತಿದ್ದಾರೆ. 2017-18ರ ಬಜೆಟ್ ನಲ್ಲಿ ಸರ್ಕಾರ ಈ ಯೋಜನೆಗಾಗಿ 2049 ಕೋಟಿ ರೂಪಾಯಿಗಳನ್ನು ಮೀಸಲಿಟ್ಟಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...