alex Certify
ಕನ್ನಡ ದುನಿಯಾ       Mobile App
       

Kannada Duniya

ಜಾರ್ಖಂಡ್ ನಲ್ಲಿ ಹಸಿವಿಗೆ ಇನ್ನೊಂದು ಬಲಿ

ಜಾರ್ಖಂಡ್ ನಲ್ಲಿ ಹಸಿವಿಗೆ ಇನ್ನೊಂದು ಮಹಿಳೆ ಸಾವನ್ನಪ್ಪಿದ್ದಾಳೆ. ಚತರಾ ಜಿಲ್ಲೆಯ 45 ವರ್ಷದ ಮೀನಾ ಆಹಾರವಿಲ್ಲದೆ ಸಾವನ್ನಪ್ಪಿದ್ದಾಳೆಂದು ಮೂಲಗಳು ಹೇಳಿವೆ. ಮಹಿಳೆ ನಾಲ್ಕು ದಿನಗಳಿಂದ ಏನನ್ನೂ ತಿಂದಿರಲಿಲ್ಲ ಎನ್ನಲಾಗಿದೆ. ಸೋಮವಾರವಷ್ಟೇ ಗಿರಿದಿಹ್ ನಲ್ಲಿ ಹಸಿವಿನಿಂದ ಮಹಳೆಯೊಬ್ಬಳು ಸಾವನ್ನಪ್ಪಿರುವ ಬಗ್ಗೆ ವರದಿಯಾಗಿತ್ತು.

ಕಿತ್ತು ತಿನ್ನುವ ಹಸಿವಿಗೆ ಜಾರ್ಖಂಡ್ ನಲ್ಲಿ ಎರಡು ಬಲಿಯಾಗಿದೆ. ಬಿಹಾರ ಮೂಲದ ಮೀನಾ ಅನೇಕ ವರ್ಷಗಳಿಂದ ಚತರಾದಲ್ಲಿ ನೆಲೆಸಿದ್ದಳು. ಕಳೆದ ನಾಲ್ಕು ದಿನಗಳಿಂದ ಏನನ್ನೂ ತಿಂದಿರಲಿಲ್ಲ. ಹಸಿವಿಗೆ ತಾಯಿ ಆರೋಗ್ಯ ಹದಗೆಟ್ಟಿತ್ತು. ಆಸ್ಪತ್ರೆಗೆ ಕರೆದೊಯ್ಯಲು ಹಣವಿರಲಿಲ್ಲ. ಆಕೆ ಮಾತನಾಡದೆ ಹೋದಾಗ ಆಸ್ಪತ್ರೆಗೆ ಹೋದೆ. ಆದ್ರೆ ತಾಯಿ ಮೃತಪಟ್ಟಿದ್ದಾಳೆಂದು ವೈದ್ಯರು ಹೇಳಿದ್ರು ಎಂದು ಮಗ ನೋವು ತೋಡಿಕೊಂಡಿದ್ದಾನೆ.

ಸೋಮವಾರ ಸಾವನ್ನಪ್ಪಿದ್ದ ಸಾವಿತ್ರಿ ದೇವಿಗೆ ರೇಷನ್ ಸಿಕ್ಕಿರಲಿಲ್ಲವಂತೆ. ರೇಷನ್ ಕಾರ್ಡ್ ಗೆ ಎಲ್ಲ ದಾಖಲೆ ನೀಡಿದ್ದರೂ ಅಧಿಕಾರಿಗಳು ರೇಷನ್ ನೀಡಿರಲಿಲ್ಲವಂತೆ. ಮೂರು ದಿನಗಳ ಕಾಲ ಹಸಿವಿನಲ್ಲಿದ್ದ ಮಹಿಳೆ ಸೋಮವಾರ ಸಾವನ್ನಪ್ಪಿದ್ದಳು ಎಂದು ಸಂಬಂಧಿಕರು ತಿಳಿಸಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...