alex Certify
ಕನ್ನಡ ದುನಿಯಾ       Mobile App
       

Kannada Duniya

ದೆಹಲಿಯಲ್ಲಿ ಹೆಚ್ಚಾಗಿದೆ ಇಂತಹ ಮಹಿಳೆಯರ ಸಂಖ್ಯೆ

ನವದೆಹಲಿ: ದೇಶದ ರಾಜಧಾನಿ ದೆಹಲಿಯಲ್ಲಿ ಮದ್ಯಪಾನ ಮಾಡುವ ಮಹಿಳೆಯರ ಸಂಖ್ಯೆ ಹೆಚ್ಚಾಗಿದೆ. ಅದೇ ರೀತಿ ದೇಶದ ಉದ್ದಗಲಕ್ಕೂ ಮದ್ಯಪಾನ ಮಾಡುವ ಮಹಿಳೆಯರ ಸಂಖ್ಯೆ ಹೆಚ್ಚಾಗ್ತಿದೆ.

ಕೇರಳ, ಆಂಧ್ರಪ್ರದೇಶ, ಮಣಿಪುರ, ಮಿಜೋರಾಂ, ಉತ್ತಾರಖಂಡ್, ಹಿಮಾಚಲ ಪ್ರದೇಶ ಮೊದಲಾದ ರಾಜ್ಯಗಳಲ್ಲಿ ಕುಡಿಯುವ ಮಹಿಳೆಯರ ಸಂಖ್ಯೆ ವಿಪರೀತ ಹೆಚ್ಚಾಗಿದೆ.

2005 -06 ಮತ್ತು 2015 -16 ರ ಅವಧಿಯಲ್ಲಿ ಮದ್ಯ ಸೇವಿಸುವ ಮಹಿಳೆಯರು ಹೆಚ್ಚಾಗಿದ್ದಾರೆ. ನ್ಯಾಷನಲ್ ಫ್ಯಾಮಿಲಿ ಹೆಲ್ತ್ ಸರ್ವೇ(NFHS) ಪ್ರಕಾರ, ಕಳೆದ 1 ದಶಕದ ಅವಧಿಯಲ್ಲಿ ದೆಹಲಿಯಲ್ಲಿ ಮದ್ಯಸೇವನೆ ಮಾಡುವ ಪುರುಷರಿಗಿಂತ ಮಹಿಳೆಯರು ಹೆಚ್ಚಿನ ಸಂಖ್ಯೆ ಜಾಸ್ತಿಯಾಗಿದೆ.

2005 -06 ರಲ್ಲಿ ಜನಸಂಖ್ಯೆಯ ಶೇ. 0.4 ರಷ್ಟು ಮಹಿಳೆಯರು ಮದ್ಯ ಸೇವನೆ ಮಾಡಿದ್ದರೆ, 2015 -16 ರಲ್ಲಿ ಇವರ ಪ್ರಮಾಣ ಶೇ. 0.7 ರಷ್ಟಿದೆ. ಮಹಿಳಾ ಮದ್ಯಪಾನಿಗಳ ಸಂಖ್ಯೆ ಹೆಚ್ಚಾಗಲು ಕೌಟುಂಬಿಕ ಸಮಸ್ಯೆ ಸೇರಿದಂತೆ ವಿವಿಧ ಕಾರಣಗಳಿವೆ ಎಂದು ಮನೋರೋಗ ಚಿಕಿತ್ಸಕ ಡಾ. ಸಮೀರ್ ಪ್ಯಾರಿಖ್ ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...