alex Certify
ಕನ್ನಡ ದುನಿಯಾ       Mobile App
       

Kannada Duniya

ಈಕೆ ಮಾಡಿರೋ ತರಕಾರಿ ಪಟ್ಟಿ ನೋಡಿದ್ರೆ ಬೆರಗಾಗ್ತಿರಿ..!

ಪತಿ-ಪತ್ನಿ ಮಧ್ಯೆ ಸರಸ, ವಿರಸ ಎಲ್ಲವೂ ಇದ್ದಿದ್ದೇ. ಸಾಮಾನ್ಯವಾಗಿ ಗಂಡ- ಹೆಂಡಿರ ಮಧ್ಯೆ ಜಗಳವಾಗೋದು ದಿನಸಿ ಲಿಸ್ಟ್ ನಿಂದಾಗಿ. ಪತ್ನಿ ದಿನಸಿ ಪಟ್ಟಿ ಮಾಡಿಕೊಡ್ತಾಳೆ, ಪತಿ ಅದನ್ನೆಲ್ಲ ಅಂಗಡಿಯಿಂದ ತರೋದು ಕಾಮನ್. ಹೇಳಿದ್ದನ್ನು ಸರಿಯಾಗಿ ತಂದಿಲ್ಲ ಅಂದಾಕ್ಷಣ ಪತ್ನಿ ಕೆರಳಿಬಿಡ್ತಾಳೆ.

ಆದ್ರೆ ಇರಾ ಲೋಂಧೆ ಎಂಬಾಕೆ ತಯಾರಿಸಿರೋ ತರಕಾರಿ ಪಟ್ಟಿ ನೋಡಿದ್ರೆ ಪತಿ ಖರೀದಿಯಲ್ಲಿ ಎಡವೋದು ಸಾಧ್ಯವೇ ಇಲ್ಲ. ತಾನು ತಯಾರಿಸಿರೋ ಲಿಸ್ಟ್ ಅನ್ನು ಟ್ವಿಟ್ಟರ್ ನಲ್ಲಿ ಹಾಕಿರೋ ಇರಾ, ಎಲ್ಲರೂ ಇದನ್ನೇ ಫಾಲೋ ಮಾಡಿ ಅಂತಾ ಸಲಹೆ ಕೊಟ್ಟಿದ್ದಾಳೆ.

ಯಾವ ತರಕಾರಿ ಹೇಗಿರಬೇಕು? ಎಷ್ಟು ಬೆಳೆದಿರಬೇಕು? ಎಷ್ಟು ಪ್ರಮಾಣದಲ್ಲಿ ಕೊಳ್ಳಬೇಕು ಎಲ್ಲವನ್ನೂ ಡಿಟೇಲ್ ಆಗಿ ಬರೆದಿದ್ದಾಳೆ ಇರಾ. ಅಷ್ಟೇ ಅಲ್ಲ ಎಲ್ಲಾ ತರಕಾರಿ ತೆಗೆದುಕೊಂಡು ಹಸಿಮೆಣಸಿನ ಕಾಯಿಯನ್ನು ಫ್ರೀಯಾಗಿ ಕೇಳು ಅಂತಾನೂ ಬರೆದಿದ್ದಾಳೆ.

ಇರಾ ಮಾಡಿರೋ ಈ ಲಿಸ್ಟ್ ಗೆ ಟ್ವಿಟ್ಟರ್ ಫಿದಾ ಆಗ್ಬಿಟ್ಟಿದೆ. ಟ್ವೀಟ್ ನೋಡಿದವರೆಲ್ಲ ಫನ್ನಿಯಾಗಿ ರಿಯಾಕ್ಟ್ ಮಾಡಿದ್ದಾರೆ. ಫ್ರೀಯಾಗಿ ಬರೀ ಹಸಿಮೆಣಸು ಮಾತ್ರವಲ್ಲ ಕೊತ್ತಂಬರಿ ಸೊಪ್ಪನ್ನೂ ಕೇಳಬೇಕಿತ್ತು ಅಂತಾ ಕಮೆಂಟ್ ಮಾಡಿದ್ದಾರೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...