alex Certify
ಕನ್ನಡ ದುನಿಯಾ       Mobile App
       

Kannada Duniya

ವಿಚಾರಣೆಯಲ್ಲಿ ಬಯಲಾಯ್ತು ಹಂತಕಿಯ ರಹಸ್ಯ

murderಅದೊಂದು ಪಕ್ಕಾ ಪ್ಲಾನ್ಡ್ ಮರ್ಡರ್. ಪತ್ನಿಯೇ ಹಂತಕಿ. ಪ್ರಿಯಕರನ ಜೊತೆ ಸೇರಿ ಗಂಡನ ಕಥೆ ಮುಗಿಸಿದ್ಲು. ಆಕೆಯ ಪ್ರಿಯಕರ ಅವಳ ಗಂಡನಿಗೆ ಕಂಠಪೂರ್ತಿ ಕುಡಿಸಿ ದೆಹಲಿಯಿಂದ ಹೊರಕ್ಕೆ ಕರೆದೊಯ್ದಿದ್ದ. ಕಾರಿನಿಂದ ಗುದ್ದಿ ಅವನನ್ನು ಕೊಂದು ಹಿಟ್ & ರನ್ ಕೇಸ್ ನಂತೆ ಬಿಂಬಿಸಿ ಎಸ್ಕೇಪ್ ಕೂಡ ಆದ.

ಇತ್ತ ಪತ್ನಿ ಮರುದಿನ ತನ್ನ ಗಂಡ ನಾಪತ್ತೆಯಾಗಿದ್ದಾನೆಂದು ದಕ್ಷಿಣ ದೆಹಲಿ ಪೊಲೀಸರಿಗೆ ದೂರು ನೀಡಿದ್ಲು. ಸುಮಾರು ಒಂದು ವಾರ ಪ್ರತಿದಿನ ಪೊಲೀಸ್ ಠಾಣೆಗೆ ಬಂದು ತನ್ನ ಗಂಡನನ್ನು ಹುಡುಕಿಕೊಡುವಂತೆ ಅಂಗಲಾಚುತ್ತಿದ್ಲು. ಯಾರೋ ಅಪರಿಚಿತರು ಪತಿಯನ್ನು ಅಪಹರಿಸಿ, ದುಡ್ಡಿಗಾಗಿ ಬೆದರಿಸುತ್ತಿದ್ದಾರೆಂದು ಹೇಳಿದ್ಲು.

ಕಳೆದ ಗುರುವಾರ ಹಂತಕಿ ಬರ್ಖಾಳ ಮುಖವಾಡ ಕಳಚಿ ಬಿದ್ದಿದೆ. ಬರ್ಖಾ ಮತ್ತಾಕೆಯ ಪ್ರಿಯಕರ ಸತ್ಬೀರ್ ನನ್ನು ಅಮಿತ್ ಕುಮಾರ್ ಕೊಲೆ ಆರೋಪದ ಮೇಲೆ ಪೊಲೀಸರು ಬಂಧಿಸಿದ್ರು. ಅಮಿತ್ ಕುಮಾರ್ ಗೆ ಬರ್ಖಾಳ ಅಫೇರ್ ಬಗ್ಗೆ ಅನುಮಾನ ಬಂದಿತ್ತು. ಸತ್ಬೀರ್ ಆಕೆಗೆ ಕಳಿಸಿದ್ದ ಮೆಸೇಜನ್ನು ಅಮಿತ್ ಓದಿದ್ದ. ಇದೇ ವಿಚಾರಕ್ಕೆ ಜಗಳ ನಡೆದು ಸತ್ಬೀರ್ ನಿಂದ ದೂರವಿರುವಂತೆ ಅಮಿತ್ ಎಚ್ಚರಿಸಿದ್ದ. ಆಗ ಪತಿಯನ್ನು ಮುಗಿಸಿಬಿಡಬೇಕೆಂದು ಬರ್ಖಾ ನಿರ್ಧರಿಸಿದ್ಲು.

ಸತ್ಬೀರ್ ಜೊತೆ ಸೇರಿ ಸೆಪ್ಟೆಂಬರ್ 9 ರಂದು ಅಮಿತ್ ನನ್ನು ಕೊಲೆ ಮಾಡಿಸಿದ್ದಳು. ಒಂದು ದಿನದ ನಂತರ ಹರಿಯಾಣ ಬಳಿ ಅಮಿತ್ ಶವ ಸಿಕ್ಕಿದ್ದು, ಅಪಘಾತ ಪ್ರಕರಣವೆಂದು ದಾಖಲಾಗಿತ್ತು. ಪೊಲೀಸ್ ಠಾಣೆಯಲ್ಲಿ ನಾಪತ್ತೆ ಕೇಸ್ ದಾಖಲಿಸಿದ್ದ ಬರ್ಖಾ, ಪತಿಯನ್ನು ಹುಡುಕಿ ಕೊಡದೇ ಇದ್ರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಸಿದ್ಲು. ಸತ್ಬೀರ್ ತನ್ನ ಕಾರಿನಿಂದ ಗುದ್ದಿ ಅಮಿತ್ ನನ್ನು ಹತ್ಯೆ ಮಾಡಿದ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿತ್ತು. ಸತ್ಬೀರ್ ನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಬರ್ಖಾ ಜೊತೆ ಸೇರಿ ಕೊಲೆ ಮಾಡಿರೋದಾಗಿ ತಪ್ಪೊಪ್ಪಿಕೊಂಡಿದ್ದಾನೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...