alex Certify
ಕನ್ನಡ ದುನಿಯಾ       Mobile App
       

Kannada Duniya

ಹುಡುಗನಂತೆ ನಟಿಸಿ ವಿವಾಹವಾಗಿದ್ದ ಯುವತಿ ವರ್ಷಗಟ್ಟಲೆ ವಂಚಿಸಿದ್ದೇಗೆ ಗೊತ್ತಾ?

ಹುಡುಗನಂತೆ ನಟಿಸಿ ಎರಡು ವಿವಾಹವಾಗಿದ್ದಲ್ಲದೇ ವರ್ಷಗಟ್ಟಲೇ ತನ್ನ ರಹಸ್ಯವನ್ನು ಮುಚ್ಚಿಟ್ಟು ವಂಚಿಸಿದ್ದ ಯುವತಿ ಪೊಲೀಸರ ಬಲೆಗೆ ಬಿದ್ದಿದ್ದಾಳೆ. ಅಚ್ಚರಿಯ ಸಂಗತಿಯೆಂದರೆ ಈಕೆಯೊಂದಿಗೆ ವಿವಾಹವಾಗಿದ್ದ ಇಬ್ಬರು ಮಹಿಳೆಯರ ಪೈಕಿ ಒಬ್ಬಾಕೆ ತನ್ನ ಪತಿ(?) ವಿರುದ್ದ ವರದಕ್ಷಿಣೆ ಕಿರುಕುಳದ ದೂರು ದಾಖಲಿಸಿದ ಸಂದರ್ಭದಲ್ಲಿ ಯುವತಿಯನ್ನು ಪೊಲೀಸರು ಬಂಧಿಸಿದ ಬಳಿಕವಷ್ಟೇ ಅದು ‘ಅವನಲ್ಲ’ ‘ಅವಳು’ ಎಂಬ ರಹಸ್ಯ ಬಯಲಾಗಿದೆ.

ಮೂಲತಃ ಉತ್ತರ ಪ್ರದೇಶದ ಬಿಜ್ನೂರು ಜಿಲ್ಲೆಯ ಧಮಪುರ್ ಗ್ರಾಮದ 26 ವರ್ಷದ ಯುವತಿ ಸ್ವೀಟಿ ಸೇನ್, 2013 ರಲ್ಲಿ ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಕೃಷ್ಣ ಸೇನ್ ಎಂಬ ಹೆಸರಿನಲ್ಲಿ ನಕಲಿ ಅಕೌಂಟ್ ತೆರೆದಿದ್ದಳಲ್ಲದೇ ತಾನು ಪುರುಷನೆಂದು ಅದರಲ್ಲಿ ಹೇಳಿಕೊಂಡಿದ್ದಳು.

ಫೇಸ್ ಬುಕ್ ಮೂಲಕವೇ ಉತ್ತರಾಕಾಂಡ್ ನ 22 ವರ್ಷದ ಯುವತಿಯನ್ನು ಪರಿಚಯಿಸಿಕೊಂಡಿದ್ದು, ಇದು ಪ್ರೀತಿಗೆ ತಿರುಗಿದ ಬಳಿಕ ತನ್ನ ಪೋಷಕರೊಂದಿಗೆ ಪುರುಷನ ವೇಷದಲ್ಲಿ ಉತ್ತರಾಕಾಂಡ್ ಗೆ ತೆರಳಿದ್ದ ಸ್ವೀಟಿ ಸೇನ್, ವಿವಾಹ ಪ್ರಸ್ತಾಪವಿಟ್ಟಿದ್ದಳು. ಇದಕ್ಕೆ ಯುವತಿ ಕುಟುಂಬದವರೂ ಒಪ್ಪಿಗೆ ಸೂಚಿಸಿದ್ದು, ವಿವಾಹ ನೆರವೇರಿತ್ತು. ಆದರೆ ಬಳಿಕ ವರದಕ್ಷಿಣೆಗಾಗಿ ಹಿಂಸಿಸುತ್ತಿದ್ದ ಕೃಷ್ಣ ಸೇನ್ ಹೆಸರಿನಲ್ಲಿದ್ದ ಸ್ವೀಟಿ ಸೇನ್, 2016 ರಲ್ಲಿ ಆಕೆಯನ್ನು ತೊರೆದಿದ್ದಳು. ಅಷ್ಟೇ ಅಲ್ಲ ಅದೇ ವರ್ಷ ನೈನಿತಾಲ್ ನ ಮತ್ತೊಬ್ಬ ಯುವತಿಯನ್ನು ಮದುವೆಯಾಗಿದ್ದಳು.

ಇತ್ತೀಚೆಗೆ ಮೊದಲ ಪತ್ನಿ ಪೊಲೀಸರಿಗೆ ವರದಕ್ಷಿಣೆ ಕಿರುಕುಳದ ದೂರು ನೀಡಿದಾಗಲೇ ಬಹು ದೊಡ್ಡ ರಹಸ್ಯ ಬಯಲಾಗಿದೆ. ಅಸಲಿಗೆ ಕೃಷ್ಣ ಸೇನ್ ಪುರುಷನೇ ಅಲ್ಲ, ಮಹಿಳೆ ಎಂಬ ಸಂಗತಿ ಕೇಳಿದ ಪೊಲೀಸರಿಗೂ ಮೊದಲಿಗೆ ನಂಬಿಕೆ ಬಂದಿರಲಿಲ್ಲ. ಬಳಿಕ ವೈದ್ಯರನ್ನು ಕರೆಸಿ ಪರೀಕ್ಷೆ ನಡೆಸಿದ ಬಳಿಕವಷ್ಟೇ ಇದು ದೃಢಪಟ್ಟಿದೆ.

ತನ್ನ ನಗ್ನ ದೇಹ ಕಾಣಿಸದಂತೆ ವರ್ಷಗಟ್ಟಲೆ ಎಚ್ಚರಿಕೆ ವಹಿಸಿದ್ದ ಸ್ವೀಟಿ ಸೇನ್, ಕೃತಕ ಗುಪ್ತಾಂಗದ ಮೂಲಕ ಇಬ್ಬರೂ ಪತ್ನಿಯರಿಗೆ ಪುರುಷನೆಂಬ ನಂಬಿಕೆ ಹುಟ್ಟಿಸಿದ್ದಳೆನ್ನಲಾಗಿದೆ. ಅಲ್ಲದೇ ಅವರುಗಳನ್ನು ತೃಪ್ತಿಪಡಿಸಲು ಸೆಕ್ಸ್ ಟಾಯ್ ಬಳಕೆ ಮಾಡಿರುವುದು ವಿಚಾರಣೆಯಲ್ಲಿ ತಿಳಿದುಬಂದಿದೆ. ಇದೀಗ ಸ್ವೀಟಿ ಸೇನ್ ವಿರುದ್ದ ಹಲವು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮದುವೆ ಮಾತುಕತೆಗೆ ಆಗಮಿಸಿದ್ದ ಆಕೆಯ ಸಂಬಂಧಿಕರ ಬಂಧನಕ್ಕೆ ಬಲೆ ಬೀಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...