alex Certify
ಕನ್ನಡ ದುನಿಯಾ       Mobile App
       

Kannada Duniya

ನಿಖಾ..ತಲಾಖ್..ಹಲಾಲಾ..ಮತ್ತೆ ನಿಖಾ..ನಂತ್ರ ಆಗಿದ್ದೇನು!?

ಸುಪ್ರೀಂ ಕೋರ್ಟ್ ತ್ರಿವಳಿ ತಲಾಖ್ ಮೇಲೆ ನಿಷೇಧ ಹೇರಿದ್ದರೂ ತ್ರಿವಳಿ ತಲಾಖ್ ಪದ್ಧತಿ ನಿಲ್ಲುವಂತೆ ಕಾಣ್ತಿಲ್ಲ. ರಾಷ್ಟ್ರ ರಾಜಧಾನಿಯಲ್ಲಿಯೇ ಇಂಥ ಘಟನೆಗಳು ನಡೆಯುತ್ತಿವೆ. ತಾಜಾ ಘಟನೆ ಘಾಜಿಯಾಬಾದ್ ನಲ್ಲಿ ನಡೆದಿದೆ. ಪತ್ನಿಗೆ ಮೂರು ಬಾರಿ ತಲಾಕ್ ಹೇಳಿ ಪತಿಯೊಬ್ಬ ಓಡಿ ಹೋಗಿದ್ದಾನೆ.

ಮದುವೆಯಾದ ಮೂರು ತಿಂಗಳಲ್ಲೇ ಒಮ್ಮೆ ತಲಾಖ್ ನೀಡಿದ್ದ. ಹಲಾಲಾ ನಂತ್ರ ಮತ್ತೆ ಮದುವೆ ಮಾಡಿಸಲಾಗಿತ್ತು. ಐದು ವರ್ಷದ ನಂತ್ರ ಮತ್ತೆ ತಲಾಖ್ ನೀಡಿ ಓಡಿ ಹೋಗಿದ್ದಾನೆ. ಆರೋಪಿ ಪತಿ ಬಗ್ಗೆ ಯಾವುದೇ ಮಾಹಿತಿ ಪತ್ತೆಯಾಗಿಲ್ಲ. ಮಹಿಳೆ ಭಯಗೊಂಡಿದ್ದು, ಘಾಜಿಯಾಬಾದ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ.

ವರದಕ್ಷಿಣೆ ನೀಡಿಲ್ಲ ಎನ್ನುವ ಕಾರಣಕ್ಕೆ ಪತಿ ತಲಾಕ್ ನೀಡಿದ್ದನಂತೆ. ಎರಡನೇ ಬಾರಿ ಮದುವೆ ಮಾಡುವ ವೇಳೆ ಪೀಡಿತೆ ತಂದೆ-ತಾಯಿ ಪತಿಗೆ ಹಣ ನೀಡಿದ್ದರಂತೆ. ಜುಲೈ 15 ರಂದು ಮಗನ ಮನೆಗೆ ತಾಯಿ ಬಂದಿದ್ದಳು ಎನ್ನಲಾಗಿದೆ. ಪೀಡಿತೆ ಸಂಬಂಧಿಕರು ಮನೆಗೆ ಬಂದಿದ್ದರಂತೆ. ಸಣ್ಣ ವಿಚಾರಕ್ಕೆ ಎರಡೂ ಕುಟುಂಬದ ಮಧ್ಯೆ ಗಲಾಟೆ ನಡೆದಿದೆ. ಕೋಪಗೊಂಡ ಪತಿ ಪತ್ನಿಗೆ ತಲಾಖ್ ನೀಡಿದ್ದಾನಂತೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...