alex Certify
ಕನ್ನಡ ದುನಿಯಾ       Mobile App
       

Kannada Duniya

ಮಹಿಳೆಯ ಪ್ರಾಣ ತೆಗೆದ ನ್ಯಾಪ್ಕಿನ್…!

diaper1

ದೆಹಲಿಯಲ್ಲಿ ಮಗುವಿನ ನ್ಯಾಪ್ಕಿನ್ ಎಸೆಯಲು ಹೋಗಿ ಮಹಿಳೆಯೊಬ್ಬಳು ಪ್ರಾಣ ಕಳೆದುಕೊಂಡಿದ್ದಾಳೆ. ಅನು ಎಂಬಾಕೆ ವಿಶ್ವಾಸ್ ನಗರದಲ್ಲಿರೋ ತನ್ನ ಚಿಕ್ಕಪ್ಪನ ಮನೆಗೆ ಬಂದಿದ್ಲು. ಟೆರೆಸ್ ಮೇಲೆ ನಿಂತು ಮನೆಯ ಪಕ್ಕದಲ್ಲೇ ಇದ್ದ ಖಾಲಿ ಜಾಗದಲ್ಲಿ ಮಗುವಿನ ನ್ಯಾಪ್ಕಿನ್ ಬಿಸಾಡಿದ್ದಾಳೆ.

ಅದು ಟೆರೆಸ್ ಗೆ ಸಮೀಪದಲ್ಲೇ ಇದ್ದ ಹೈಟೆನ್ಷನ್ ವೈರ್ ಗೆ ತಗುಲಿದೆ. ನ್ಯಾಪ್ಕಿನ್ ಒದ್ದೆಯಾಗಿದ್ದಿದ್ರಿಂದ ವಿದ್ಯುತ್ ತಂತಿ ಮಹಿಳೆಯನ್ನು ಕೂಡ ತನ್ನತ್ತ ಸೆಳೆದುಕೊಂಡುಬಿಟ್ಟಿದೆ. ಆಕೆಯ ಬಟ್ಟೆಗೆ ಬೆಂಕಿ ಹೊತ್ತಿಕೊಂಡಿದೆ. ಭಯದಿಂದ ಅನು ಕಿರುಚಿಕೊಳ್ತಿದ್ದಂತೆ ಎಲ್ರೂ ಧಾವಿಸಿ ಬಂದ್ರು.

ಆಕೆಯನ್ನು ಕೂಡಲೇ ಆಸ್ಪತ್ರೆಗೆ ದಾಖಲು ಮಾಡಲಾಯ್ತು. ಆದ್ರೆ ತೀವ್ರ ಸುಟ್ಟ ಗಾಯಗಳಿಂದ ಮೃತಪಟ್ಟಿದ್ದಾಳೆ. ರಜೆ ಕಳೆಯಲು ಅಂತಾ ಅನು ಮಗನ ಜೊತೆಗೆ ಹಿಮಾಚಲ ಪ್ರದೇಶದಿಂದ ದೆಹಲಿಗೆ ಆಗಮಿಸಿದ್ಲು. ಮಹಿಳೆ ಸಾವಿನ ಬಗ್ಗೆ ಪ್ರಕರಣ ದಾಖಲಾಗಿದ್ದು, ವಿದ್ಯುತ್ ನಿಗಮದ ಬೇಜವಾಬ್ಧಾರಿತನದ ಬಗ್ಗೆ ತನಿಖೆ ನಡೆಯುತ್ತಿದೆ.

 

Subscribe Newsletter

Get latest updates on your inbox...

Opinion Poll

  • ಕಪ್ಪು ಹಣಕ್ಕೆ ಕಡಿವಾಣ ಹಾಕುವ ಕೇಂದ್ರ ಸರ್ಕಾರದ ಪ್ರಯತ್ನ ವಿಫಲವಾಗಿದೆಯೇ..?

    View Results

    Loading ... Loading ...