alex Certify
ಕನ್ನಡ ದುನಿಯಾ       Mobile App
       

Kannada Duniya

ಮಹಿಳೆಯರೇ ಅಪರಿಚಿತ ವಾಹನದ ಬಗ್ಗೆ ಇರಲಿ ಎಚ್ಚರ…!

ಅಹಮದಾಬಾದ್: ಮಹಿಳೆಯರೇ ಅಪರಿಚಿತ ವಾಹನದಲ್ಲಿ ಹೋಗುವ ಮುಂಚೆ ಎಚ್ಚರ!!! ಹಾಗೆ ಹೋದಿರೆಂದರೆ ನಿಮ್ಮ ಪ್ರಾಣಕ್ಕೇ ಕುತ್ತು ಬಂದೀತು. ಇಲ್ಲೊಬ್ಬಳು ಮಹಿಳೆ ಡ್ರಾಪ್ ಕೊಡುತ್ತಾನೆಂದು ನಂಬಿ ಕಾರಿನಲ್ಲಿ ಹೋಗಿದ್ದು, ಆತ ಅತ್ಯಾಚಾರಕ್ಕೆ ಯತ್ನಿಸಿದಾಗ ಪ್ರತಿರೋಧ ಒಡ್ಡಿದ್ದಕ್ಕೆ ಚಲಿಸುತ್ತಿರುವ ಕಾರಿನಿಂದಲೇ ದಬ್ಬಿದ್ದಾನೆ. ಪರಿಣಾಮ ಆಕೆ ಮೃತಪಟ್ಟಿದ್ದಾಳೆ.

ಗುಜರಾತ್ ಜಿಲ್ಲೆಯ ಸುರೇಂದ್ರನಗರ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಕಾರಿನಿಂದ ಬಿದ್ದಿದ್ದ ಮಹಿಳೆಯನ್ನು ಆಸ್ಪತ್ರೆಗೆ ಸೇರಿಸಲಾಯಿತಾದರೂ ತೀವ್ರವಾಗಿ ಗಾಯಗೊಂಡಿದ್ದರಿಂದ ಆಕೆ ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದಿದ್ದಾಳೆ.

ಅಹಮದಾಬಾದ್ ನಿಂದ 125 ಕಿ.ಮೀ. ದೂರದಲ್ಲಿರುವ ಶಾಯ್ಲಾದ ಆಸ್ಪತ್ರೆಯೊಂದರಲ್ಲಿ ನರ್ಸ್ ಆಗಿರುವ ಮಹಿಳೆ, ಅಲ್ಲಿಂದ ಮನೆಗೆ ಹೊರಟಿದ್ದಳು. ಆದರೆ, ದಾರಿ ಮಧ್ಯೆ ಕಾರಿನಲ್ಲಿ ಬರುತ್ತಿದ್ದ ಶಾಂತುಬಾಯ್ ದರ್ಬಾರ್ ಎಂಬಾತ ಲಿಫ್ಟ್ ಕೊಡುವುದಾಗಿ ನಂಬಿಸಿ ಹತ್ತಿಸಿಕೊಂಡಿದ್ದಾನೆ. ಈ ವೇಳೆ ಆಕೆ ಜತೆ ಅಸಭ್ಯವಾಗಿ ವರ್ತಿಸಿ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಆಕೆ ಪ್ರತಿರೋಧ ವ್ಯಕ್ತಪಡಿಸಿದ್ದರಿಂದ ಚಲಿಸುತ್ತಿರುವ ಕಾರಿನಿಂದಲೇ ನೂಕಿದ್ದಾನೆ. ಇದರಿಂದ ಕೆಳಗೆ ಬಿದ್ದ ಮಹಿಳೆಗೆ ತೀವ್ರ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾಳೆ. ಸದ್ಯ ಆರೋಪಿ ಮೇಲೆ ಸೆಕ್ಷನ್ 302ರ ಅಡಿ ಕೊಲೆ ಹಾಗೂ 354ರ ಅಡಿ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...