alex Certify
ಕನ್ನಡ ದುನಿಯಾ       Mobile App
       

Kannada Duniya

ಕೈಯಲ್ಲಿರುವ ಪಿಸ್ತೂಲ್ ಅಸಲಿ ಅಂತಾ ತೋರಿಸಲು ಹೊಡೆದನಂತೆ ಗುಂಡು…!

ದೆಹಲಿಯ ಜಿಟಿಬಿ ಆಸ್ಪತ್ರೆ ಸ್ಟ್ರೆಚರ್ ಮೇಲೆ ಅನಾಥವಾಗಿ ಬಿದ್ದಿದ್ದ ಮಹಿಳೆಯ ಶವದ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಿದೆ. ಮಹಿಳೆ ಕೇಳಿದ ಪ್ರಶ್ನೆಯೊಂದು ಸಾವಿಗೆ ದಾರಿ ತೋರಿಸಿದೆ. ಘಟನೆಗೆ ಸಂಬಂಧಿಸಿದಂತೆ ಒಬ್ಬ ಆರೋಪಿಯನ್ನ ಬಂಧಿಸಿದ್ದು, ಇನ್ನೊಬ್ಬನ ಹುಡುಕಾಟ ನಡೆಸಿದ್ದಾರೆ ಪೊಲೀಸರು.

ವಾಸ್ತವವಾಗಿ ಪವನ್ ಎಂಬಾತ ಬುಟೀಕ್ ಒಂದರಲ್ಲಿದ್ದ ಮಹಿಳೆಯನ್ನು ಪ್ರೀತಿ ಮಾಡ್ತಿದ್ದ. ಕೆಲ ದಿನಗಳ ನಂತ್ರ ಇಬ್ಬರ ಸಂಬಂಧ ಮುರಿದು ಬಿದ್ದಿತ್ತು. ನಂತ್ರ ಪವನ್ ಬೇರೆ ಹುಡುಗಿಯನ್ನು ಮದುವೆಯಾಗಿದ್ದ. ಆದ್ರೆ ಬುಟೀಕ್ ನಲ್ಲಿದ್ದ ಹುಡುಗಿ, ಪವನ್ ಪತ್ನಿಗೆ ಹಳೆ ಕಥೆ ಹೇಳಿದ್ದಳು.

ಇದ್ರಿಂದ ಕೋಪಗೊಂಡ ಪವನ್ ಸ್ನೇಹಿತನ ಬುಟೀಕ್ ಗೆ ಬಂದು ಮಾಜಿ ಪ್ರೇಯಸಿಗೆ ಹೆದರಿಸುವ ಯತ್ನ ನಡೆಸಿದ್ದಾನೆ. ಸನ್ನಿ ಎಂಬಾತನ ಜೊತೆ ಬಂದಿದ್ದ ಪವನ್, ಮಾಜಿ ಪ್ರೇಯಸಿ ಕೆಲಸ ಮಾಡುವ ಸ್ಥಳಕ್ಕೆ ಬಂದು ಪಿಸ್ತೂಲು ತೋರಿಸಿದ್ದಾನೆ. ಪಿಸ್ತೂಲು ನೋಡಿದ ಗ್ರಾಹಕಿಯೊಬ್ಬಳು ಕಿರುಚಿದ್ದಾಳೆ. ಆಕೆಯನ್ನು ಸಂಭಾಳಿಸಲು ಪವನ್ ಪಿಸ್ತೂಲನ್ನು ಸನ್ನಿ ಕೈಗೆ ನೀಡಿದ್ದಾನೆ. ಇಷ್ಟರ ಮಧ್ಯೆ ಇನ್ನೊಂದು ರೂಮಿನಲ್ಲಿದ್ದ ಮಹಿಳೆಯೊಬ್ಬಳು ಘಟನೆ ನಡೆದ ಸ್ಥಳಕ್ಕೆ ಬಂದಿದ್ದಾಳೆ. ಸನ್ನಿ ಕೈನಲ್ಲಿದ್ದ ಪಿಸ್ತೂಲ್ ನೋಡಿದ ಮಹಿಳೆ ಇದು ಆಟಿಕೆ ಪಿಸ್ತೂಲ ಎಂದು ಪ್ರಶ್ನೆ ಮಾಡಿದ್ದಾಳೆ. ಅಲ್ಲ ಇದು ವರ್ಜಿನಲ್ ಎಂಬುದನ್ನು ತೋರಿಸಲು ಮುಂದಾದ ಸನ್ನಿ ಆಕೆ ಹೊಟ್ಟೆಗೆ ಗುಂಡು ಹಾರಿಸಿದ್ದಾನೆ. ಘಟನೆ ನಂತ್ರ ಚಿಕಿತ್ಸೆ ಕೊಡಿಸುವ ಬದಲು ಆರೋಪಿಗಳು ಆಸ್ಪತ್ರೆ ಸ್ಟ್ರೆಚರ್ ಮೇಲೆ ಮಹಿಳೆ ಮಲಗಿಸಿ ಬಂದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...