alex Certify
ಕನ್ನಡ ದುನಿಯಾ       Mobile App
       

Kannada Duniya

ಭ್ರೂಣವನ್ನು ತೆಗೆಸಲು ಹೈಕೋರ್ಟ್ ಮೊರೆ ಹೋದ ಮಹಿಳೆ

ನಾಸಿಕ್ ಮೂಲದ ಮಹಿಳೆಯೊಬ್ಬರು ತಮ್ಮ ಗರ್ಭದಲ್ಲಿರುವ ದೋಷಪೂರಿತ ಭ್ರೂಣವನ್ನು ತೆಗೆದು ಹಾಕಿಸೋಕೆ ಹೈಕೋರ್ಟ್ ಮೊರೆ ಹೋಗಿರುವ ಪ್ರಕರಣ ಬೆಳಕಿಗೆ ಬಂದಿದೆ. 30ನೇ ವಾರದ ಗರ್ಭಿಣಿಯಾಗಿರುವ ಮಹಿಳೆ, ವೈದ್ಯಕೀಯ ಪರೀಕ್ಷೆಯಲ್ಲಿ ಗರ್ಭದಲ್ಲಿರುವ ಮಗು ದೋಷದಿಂದ ಕೂಡಿದೆ ಅನ್ನೋದು ಖಚಿತವಾದ ಮೇಲಷ್ಟೆ ಹೈಕೋರ್ಟ್ನಲ್ಲಿ ಅರ್ಜಿ ಹಾಕಿದ್ದಾರೆ.

ಮಹಿಳೆ ಈಗಾಗ್ಲೇ 5ವರ್ಷದ ಗಂಡು ಮಗುವನ್ನು ಹೊಂದಿದ್ದಾರೆ. ಆತ ಕೂಡ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದಾನೆ. ದಂಪತಿ ಆ ಮಗುವಿಗೆ ಚಿಕಿತ್ಸೆ ಕೊಡಿಸೋದಕ್ಕೆ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರಂತೆ. ಈ ಹಂತದಲ್ಲಿ ಮತ್ತೊಮ್ಮೆ ಮಾನಸಿಕ ಅಸ್ವಸ್ಥತೆಯ ಮಗುವಿಗೆ ತಾಯಿ ಜನ್ಮ ನೀಡೋದಕ್ಕೆ ಹಿಂದೇಟು ಹಾಕ್ತಿದ್ದಾರೆ. ಹಾಗಾಗಿ ವೈದ್ಯರ ಸಲಹೆ ಮೇರೆಗೆ, ವೈದ್ಯಕೀಯ ವಿಧಾನದ ಮೂಲಕ ಭ್ರೂಣವನ್ನು ತೆಗೆಸಿಹಾಕೋದಕ್ಕೆ ದಂಪತಿ ಕೋರ್ಟ್ ಮೆಟ್ಟಿಲೇರಿದ್ದಾರೆ.

ಸೆಪ್ಟೆಂಬರ್ 11ರಂದು ಕೋರ್ಟ್ಗೆ ಮನವಿ ಸಲ್ಲಿಸಿರುವ ದಂಪತಿಯ ಪ್ರಕರಣ ಬಹುಶಃ ಸೆಪ್ಟೆಂಬರ್ 21ಕ್ಕೆ ವಿಚಾರಣೆಗೆ ಬರುವ ಸಾಧ್ಯತೆ ಇದೆ ಅಂತ ಹೇಳಲಾಗ್ತಿದೆ. ಗರ್ಭದಲ್ಲಿರುವ ಮಗುವಿನ ಮೆದುಳಿನಲ್ಲಿ ಕಾಣಿಸಿಕೊಂಡಿರುವ ಸಮಸ್ಯೆಯಿಂದಾಗಿ ಮಗು ಶ್ರವಣ ಮತ್ತು ಮಾತಿನ ದೋಷದಿಂದ ಜನಿಸುವ ಸಾಧ್ಯತೆ ಇದೆ ಅಂತ ವೈದ್ಯರು ವರದಿ ನೀಡಿದ್ದಾರೆ. ಹಾಗಾಗಿ ಕೋರ್ಟ್ ಈ ಬಗ್ಗೆ ತೀರ್ಪು ಪ್ರಕಟಿಸುವ ಸಾಧ್ಯತೆ ಇದೆ.

12ರಿಂದ 20 ವಾರಗಳ ಒಳಗೆ ಗರ್ಭದಲ್ಲಿ ಸಮಸ್ಯೆ ಕಾಣಿಸಿಕೊಂಡ ಪಕ್ಷದಲ್ಲಿ , ಗರ್ಭಿಣಿಯ ದೈಹಿಕ ಮತ್ತು ಮಾನಸಿಕ ಆರೋಗ್ಯದಲ್ಲಿ ವ್ಯತ್ಯಾಸವಾದ ಪಕ್ಷದಲ್ಲಿ, ಇಬ್ಬರು ವೈದ್ಯರ ಸಲಹೆಯ ಆಧಾರದ ಮೇಲೆ ವೈದ್ಯರೇ ಭ್ರೂಣವನ್ನು ತೆಗೆಯಬಹುದಾಗಿದೆ. ಆದ್ರೆ 20 ವಾರಗಳ ನಂತರದ ಪರಿಸ್ಥಿತಿಯಲ್ಲಿ ಕೋರ್ಟ್ ಅನುಮತಿಯನ್ನ ಪಡೆದ ನಂತರವಷ್ಟೆ ಭ್ರೂಣವನ್ನು ತೆಗೆಸಬೇಕಾಗುತ್ತದೆ. ಹಾಗಾಗಿ ದಂಪತಿ ಈಗ ನ್ಯಾಯಾಲಯದ ಮೊರೆ ಹೋಗಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...