alex Certify
ಕನ್ನಡ ದುನಿಯಾ       Mobile App
       

Kannada Duniya

ಪತಿಯ ಈ ಚಟಕ್ಕೆ ಹಾಳಾಯ್ತು ಪತ್ನಿಯ ಲೈಂಗಿಕ ಜೀವನ

ಮುಂಬೈನ ಮಹಿಳೆಯೊಬ್ಬಳು ಪೋರ್ನ್ ಚಿತ್ರಗಳ ಮೇಲೆ ನಿಷೇಧ ಹೇರುವಂತೆ ಆಗ್ರಹಿಸಿ ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದಾಳೆ. ಆಕೆ ಪತಿ ಪೋರ್ನ್ ಚಿತ್ರಗಳ ದಾಸನಾಗಿರುವುದೇ ಇದಕ್ಕೆ ಕಾರಣವಾಗಿದೆ. ಸದಾ ಪೋರ್ನ್ ಚಿತ್ರಗಳನ್ನು ನೋಡುವುದ್ರಿಂದ ತನ್ನ ದಾಂಪತ್ಯ ಜೀವನ ಹಾಳಾಗಿದೆ ಎಂದು ಮಹಿಳೆ ಅರ್ಜಿಯಲ್ಲಿ ಹೇಳಿದ್ದಾಳೆ.

27 ವರ್ಷದ ಮಹಿಳೆ ಮಾರ್ಚ್ 10,2016 ರಂದು ಮದುವೆಯಾಗಿದ್ದಾಳೆ. ಅಲ್ಲಿಂದ ಇಲ್ಲಿಯವರೆಗೂ ಪತಿ ಲೈಂಗಿಕ ಜೀವನದಲ್ಲಿ ಆಸಕ್ತಿ ತೋರಿಲ್ಲವಂತೆ. ಪತಿಯ ಪೋರ್ನ್ ಗೀಳಿನಿಂದಾಗಿ ಸಂಬಂಧ ಹಾಳಾಗಿದೆಯಂತೆ. ದಾಂಪತ್ಯದಲ್ಲಿ ಸುಖವಿಲ್ಲವೆಂದು ಮಹಿಳೆ ದೂರಿದ್ದಾಳೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್, ಅರ್ಜಿ ವಿಚಾರಣೆ ನಡೆಸುತ್ತಿದೆ.

2016ರಲ್ಲಿಯೇ ಸುಪ್ರೀಂ ಕೋರ್ಟ್ ಪೋರ್ನ್ ಸೈಟ್ ಗಳ ಮೇಲೆ ನಿಷೇಧ ಹೇರುವಂತೆ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿತ್ತು. ಪೋರ್ನ್ ಸೈಟ್ ನಿಷೇಧಕ್ಕೆ ಪ್ರಯತ್ನ ನಡೆಸುವುದಾಗಿ ಕೇಂದ್ರ ಸರ್ಕಾರ ಕೂಡ ಭರವಸೆ ನೀಡಿತ್ತು. ಆದ್ರೆ ಈವರೆಗೂ ಈ ಬಗ್ಗೆ ಅಂತಿಮ ನಿರ್ಧಾರ ಹೊರಗೆ ಬಂದಿಲ್ಲ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...