alex Certify
ಕನ್ನಡ ದುನಿಯಾ       Mobile App
       

Kannada Duniya

ನಾನೇ ಜಯಲಲಿತಾ ಮಗಳು ಎನ್ನುತ್ತಿದ್ದಾಳೆ ಬೆಂಗಳೂರಿನ ಮಹಿಳೆ

ಬೆಂಗಳೂರಿನ 37 ವರ್ಷದ ಮಹಿಳೆಯೊಬ್ಬಳು ತಾನು ಜಯಲಲಿತಾರ ಪುತ್ರಿ ಅಂತಾ ಹೇಳಿಕೊಂಡಿದ್ದಾಳೆ. ಅದನ್ನು ಸಾಬೀತು ಪಡಿಸಲು ಡಿಎನ್ಎ ಪರೀಕ್ಷೆ ಮಾಡಿಸುವಂತೆ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾಳೆ. ಅಮೃತಾ ಎಂಬ ಈ ಮಹಿಳೆಯನ್ನು ಜಯಲಲಿತಾರ ಸಹೋದರಿ ದತ್ತು ಪಡೆದು, ಸಾಕಿದ್ದಾರಂತೆ.

ಜಯಲಲಿತಾರ ನಿಧನದ ನಂತರ ತನ್ನ ಜನ್ಮ ರಹಸ್ಯ ತಿಳಿದಿದೆ ಎಂದು ಅಮೃತಾ ಹೇಳಿಕೊಳ್ತಿದ್ದಾಳೆ. 1980ರ ಆಗಸ್ಟ್ 14ರಂದು, ಜಯಲಲಿತಾರ ಮೈಲಾಪುರ ನಿವಾಸದಲ್ಲೇ ತನ್ನ ಜನನವಾಗಿದೆ, ಆದ್ರೆ ಇದನ್ನು ರಹಸ್ಯವಾಗಿಡಲಾಗಿತ್ತು ಅಂತಾ ಅಮೃತಾ ಹೇಳಿದ್ದಾಳೆ.

ಜಯಲಲಿತಾ ಕುಟುಂಬಕ್ಕೆ ಆಪ್ತರಾಗಿದ್ದ ಎಲ್.ಎಸ್. ಲಲಿತಾ ಹಾಗೂ ರಂಜನಿ ರವೀಂದ್ರನಾಥ್ ಕೂಡ ಅಮೃತಾ ಪರ ನಿಂತಿದ್ದಾರೆ. ಜಯಾರ ಹಿರಿಯ ಸಹೋದರಿ ಶೈಲಜಾ, ಅಮೃತಾಳನ್ನು ಸಾಕಿದ್ದಾರೆ. ಆದ್ರೆ ಶೈಲಜಾ ಪತಿ ಸಾರಥಿ, ತಾನು ಜಯಾ ಜೊತೆಗೆ ಸಂಬಂಧ ಹೊಂದಿದ್ದೆ ಅಂತಾ ಹೇಳಿಕೊಂಡಿದ್ದರು ಅಂತಾನೂ ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ. ಹಾಗಾಗಿ ಈ ವಿವಾದ ಮತ್ತಷ್ಟು ಗೋಜಲಾಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...