alex Certify
ಕನ್ನಡ ದುನಿಯಾ       Mobile App
       

Kannada Duniya

ಸಾಮಾಜಿಕ ಜಾಲತಾಣ ನೋಡಿ ಸೆಕ್ಸ್ ಗಾಗಿ ಮಹಿಳೆಗೆ ಕರೆ ಮಾಡಲು ಶುರುಮಾಡಿದ್ರು

ವಾಟ್ಸಾಪ್ ನಲ್ಲಿ ಅಪರಿಚಿತ ನಂಬರ್ ನಿಂದ ಬರ್ತಿದ್ದ ಅಶ್ಲೀಲ ವಿಡಿಯೋ ಕಾಲ್ ವಿರುದ್ಧ ಮಹಿಳೆಯೊಬ್ಬಳು ದೂರು ನೀಡಿದ್ದಾಳೆ. ಘಟನೆ ಮುಂಬೈನ ದಹಿಸಾರದಲ್ಲಿ ನಡೆದಿದೆ. 33 ವರ್ಷದ ಮಹಿಳೆಯೊಬ್ಬಳ ದೂರಿನ ಪ್ರಕಾರ ಸೈಬರ್ ಅಪರಾಧಿಯೊಬ್ಬ ಸಾಮಾಜಿಕ ಜಾಲತಾಣದಲ್ಲಿ ನಕಲಿ ಪ್ರೊಫೈಲ್ ಸಿದ್ಧಪಡಿಸಿದ್ದಾನಂತೆ. ನಂತ್ರ ಜನರಿಗೆ ನಂಬರ್ ನೀಡಿದ್ದಾನಂತೆ.

ಮಹಿಳೆ ನಂಬರ್ ಗೆ ಅನೇಕರು ಕರೆ ಮಾಡಿದ್ದಾರಂತೆ. ಆಗಸ್ಟ್ 4 ರಿಂದ ಆಗಸ್ಟ್ 24 ರವರೆಗೆ ಅನೇಕರು ಕರೆ ಮಾಡಿದ್ದಾರಂತೆ. ಒಬ್ಬರು ಇನ್ಸ್ಟ್ರಾಗ್ರಾಮ್ ನಲ್ಲಿ ನಂಬರ್ ಸಿಕ್ಕಿದೆ ಎಂದ್ರೆ ಮತ್ತೆ ಕೆಲವರು ಫೇಸ್ಬುಕ್ ನಲ್ಲಿ ನಂಬರ್ ಪಡೆದಿರುವುದಾಗಿ ಹೇಳ್ತಿದ್ದಾರೆ.

ಫೇಸ್ಬುಕ್ ಹಾಗೂ ಇನ್ಸ್ಟ್ರಾಗ್ರಾಮ್ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ಬೇರೆ ಮಹಿಳೆ ಫೋಟೋ ಹಾಕಿ ಪೀಡಿತ ಮಹಿಳೆ ನಂಬರ್ ನೀಡಲಾಗಿದೆ. ಸೆಕ್ಸ್ ಗೆ ಸಂಪರ್ಕಿಸಿ ಎಂದು ಪೋಸ್ಟ್ ಮಾಡಲಾಗಿದೆ. ಮೊದಲು ಮಹಿಳೆ ಪತಿ ಈ ನಂಬರ್ ಬಳಸುತ್ತಿದ್ದನಂತೆ. ಈಗ ಮಹಿಳೆ ಬಳಸುತ್ತಿದ್ದಾಳೆ. ಮದುವೆಗೆ ಪತಿ ಕುಟುಂಬಸ್ಥರು ವಿರೋಧ ವ್ಯಕ್ತಪಡಿಸಿದ್ದರು. ಅವ್ರೇ ಈ ಕೆಲಸ ಮಾಡಿರಬಹುದೆಂಬುದು ಮಹಿಳೆ ಶಂಕೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...