alex Certify
ಕನ್ನಡ ದುನಿಯಾ       Mobile App
       

Kannada Duniya

ನೆರೆಮನೆಯವನೊಂದಿಗೆ ಪರಾರಿಯಾಗಿದ್ದ ಮಹಿಳೆ ಮೇಲೆ ಅಮಾನುಷ ಹಲ್ಲೆ

ವಿವಾಹಿತ ಮಹಿಳೆಯೊಬ್ಬಳು ತನ್ನ ನೆರೆಮನೆಯವನೊಂದಿಗೆ ಪರಾರಿಯಾಗಿದ್ದಳೆಂಬ ಕಾರಣಕ್ಕೆ ಆಕೆಯ ಪತಿ, ಸಾರ್ವಜನಿಕರ ಸಮ್ಮುಖದಲ್ಲೇ ಅಮಾನುಷವಾಗಿ ಹಲ್ಲೆ ಮಾಡಿರುವ ಘಟನೆ ಉತ್ತರ ಪ್ರದೇಶದ ಬುಲಂದ್ ಶಹರ್ ಜಿಲ್ಲೆಯ ಲಾಂಗಾ ಗ್ರಾಮದಲ್ಲಿ ನಡೆದಿದೆ.

ಮಾರ್ಚ್ 10 ರಂದು ಈ ಘಟನೆ ನಡೆದಿದೆ ಎನ್ನಲಾಗಿದ್ದು, ಶೌದನ್ ಸಿಂಗ್ ಎಂಬಾತನ ಪತ್ನಿ ಮಾರ್ಚ್ 5 ರಂದು ನೆರೆಮನೆಯ ಧಮೇಂದ್ರ ಲೋಧಿ ಎಂಬಾತನೊಂದಿಗೆ ಪರಾರಿಯಾಗಿದ್ದಳೆನ್ನಲಾಗಿದೆ.

ಪಕ್ಕದ ಗ್ರಾಮದಲ್ಲಿದ್ದ ಇವರುಗಳನ್ನು ಎಳೆದುಕೊಂಡು ಬರಲಾಗಿದ್ದು, ಪಂಚಾಯಿತಿ ನಡೆಸಲಾಗಿದೆ. ಪಂಚಾಯಿತಿ ಮುಖ್ಯಸ್ಥ ಸಾರ್ವಜನಿಕವಾಗಿ ಥಳಿಸುವಂತೆ ತಿಳಿಸಿದ ಮೇರೆಗೆ ಮಹಿಳೆಯ ಪತಿ, ಮರವೊಂದಕ್ಕೆ ಆಕೆಯನ್ನು ಕಟ್ಟಿ ಹಾಕಿ ಬೆಲ್ಟ್ ನಿಂದ ಮನಬಂದಂತೆ ಥಳಿಸಿದ್ದಾನೆ.

ಈ ಸಂದರ್ಭದಲ್ಲಿ ನೂರಾರು ಮಂದಿ ನೆರೆದಿದ್ದು, ಯಾರೊಬ್ಬರೂ ಮಹಿಳೆಯ ಸಹಾಯಕ್ಕೆ ಮುಂದಾಗಿಲ್ಲ. ಮಹಿಳೆ ತನ್ನನ್ನು ಬಿಡುವಂತೆ ಅಂಗಲಾಚಿ ಬೇಡಿಕೊಳ್ಳುತ್ತಿದ್ದರೂ ನೆರೆದವರ ಮನ ಕರಗಿಲ್ಲ. ವ್ಯಕ್ತಿಯೊಬ್ಬರು ತಮ್ಮ ಮೊಬೈಲ್ ನಲ್ಲಿ ಹಲ್ಲೆಯ ದೃಶ್ಯವನ್ನು ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ಇದು ವೈರಲ್ ಆಗುತ್ತಿದ್ದಂತೆಯೇ ಮಾಹಿತಿ ಪಡೆದ ಪೊಲೀಸರು ಮಹಿಳೆಯ ಪತಿ, ಪಂಚಾಯಿತಿ ಮುಖ್ಯಸ್ಥ ಹಾಗೂ ಆತನ ಪುತ್ರನನ್ನು ಬಂಧಿಸಿದ್ದಾರೆ. ಅಲ್ಲದೇ ಇನ್ನೂ ಹಲವರ ವಿರುದ್ದ ಪ್ರಕರಣ ದಾಖಲಿಸಿಕೊಂಡಿದ್ದು, ಅವರುಗಳನ್ನು ಬಂಧಿಸಲು ಕ್ರಮ ಕೈಗೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...