alex Certify
ಕನ್ನಡ ದುನಿಯಾ       Mobile App
       

Kannada Duniya

ಕನ್ಯಾದಾನವಿಲ್ಲದೇ ಮದುವೆ ಮಾಡಿಸೋ ಈ ಅರ್ಚಕಿಗೆ ಬಹುಬೇಡಿಕೆ

ವರದಕ್ಷಿಣೆ ಪಿಡುಗು ಇಂದು ನಿನ್ನೆಯ ಸಮಸ್ಯೆಯಲ್ಲ. ಬಹಳ ವರ್ಷಗಳಿಂದ್ಲೂ ಹೆಣ್ಣು ಹೆತ್ತವರನ್ನು ಕಂಗೆಡಿಸಿದೆ. ಆದ್ರೆ 2018 ನಿಜಕ್ಕೂ ಬದಲಾವಣೆಯ ಸಮಯ ಎನ್ನಬಹುದು. ಕೋಲ್ಕತ್ತಾದ ಅರ್ಚಕಿಯೊಬ್ಬರು ಕ್ರಾಂತಿಕಾರಿ ಬದಲಾವಣೆಯನ್ನೇ ಮಾಡಿದ್ದಾರೆ.

ನಂದಿನಿ ಭೌಮಿಕ್ ಎಂಬ ಅರ್ಚಕಿ, ಹೆತ್ತವರಿಗೆ ನಯಾಪೈಸೆ ಖರ್ಚಿಲ್ಲದಂತೆ ಹತ್ತಾರು ಹೆಣ್ಣುಮಕ್ಕಳ ಮದುವೆ ಮಾಡಿಸಿದ್ದಾಳೆ. ಹೆಣ್ಣುಮಕ್ಕಳನ್ನು ಒಂದು ವಸ್ತು ಎಂಬಂತೆ ವರನ ಕಡೆಯವರಿಗೆ ದಾನ ಮಾಡುವ ಆಚರಣೆಯೇ ನಂದಿನಿಗೆ ಇಷ್ಟವಿರಲಿಲ್ಲ.

ಕನ್ಯಾದಾನ ಶಾಸ್ತ್ರದಲ್ಲೇ ವರನ ಕಡೆಯವರು ವಧುವಿನ ಹೆತ್ತವರಿಂದ ವರದಕ್ಷಿಣೆ ಪಡೆಯುತ್ತಾರೆ. ಹಾಗಾಗಿ ಕನ್ಯಾದಾನ ಶಾಸ್ತ್ರವಿಲ್ಲದೆಯೇ ನಂದಿನಿ ಮದುವೆ ಮಾಡಿಸ್ತಾರೆ. ಜಾದವ್ಪುರ ಯೂನಿವರ್ಸಿಟಿಯಲ್ಲಿ ಸಂಸ್ಕೃತ ಶಿಕ್ಷಕಿಯಾಗಿರೋ ನಂದಿನಿ ಸಂಸ್ಕೃತದಲ್ಲಿ ಮಂತ್ರೋಚ್ಛಾರಣೆ ಮಾಡಿ ಅದರ ಅರ್ಥವನ್ನು ಇಂಗ್ಲಿಷ್ ಮತ್ತು ಬಂಗಾಳಿಯಲ್ಲಿ ವಿವರಿಸ್ತಾರೆ.

ಅವರ ಜೊತೆಗಿರುವ ಮೂವರು ಸಹ ಅರ್ಚಕಿಯರು ಕೂಡ ಇದೇ ರೀತಿ ಮಾಡ್ತಿದ್ದಾರೆ. ಇದು ವಧು-ವರರಿಗೆ ಖುಷಿ ಕೊಡ್ತಿದೆ. ಮದುವೆ ಶಾಸ್ತ್ರಗಳನ್ನೆಲ್ಲ ಕೂಲಂಕುಷವಾಗಿ ತಿಳಿದುಕೊಳ್ಳುವ ಅವಕಾಶ ಸಿಗ್ತಿದೆ. ಹಾಗಾಗಿ ಈಗ ಎಲ್ಲರೂ ಮದುವೆ ಪೌರೋಹಿತ್ಯಕ್ಕೆ ನಂದಿನಿಯೇ ಬೇಕು ಎನ್ನುತ್ತಿದ್ದಾರಂತೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...