alex Certify
ಕನ್ನಡ ದುನಿಯಾ       Mobile App
       

Kannada Duniya

ವಿಮಾನ ಮಿಸ್ ಮಾಡಿಕೊಂಡಾಕೆ ಕೊನೆಗೆ ಮಾಡಿದ್ದೇನು?

ದೆಹಲಿಯ ಇಂದಿರಾ ಗಾಂಧಿ ವಿಮಾನ ನಿಲ್ದಾಣದಲ್ಲಿ ಮಹಿಳೆ ಹಾಗೂ ಸಿಬ್ಬಂದಿ ಮಧ್ಯೆ ಹೊಡೆದಾಟ ನಡೆದಿದೆ. ಇಬ್ಬರೂ ಪರಸ್ಪರ ಕಪಾಳಮೋಕ್ಷ ಮಾಡಿಕೊಂಡಿದ್ದಾರೆ. ಬೆಳಗ್ಗೆ 5 ಗಂಟೆಗೆ ದೆಹಲಿಯಿಂದ ಅಹಮದಾಬಾದ್ ಗೆ ತೆರಳಬೇಕಿದ್ದ ವಿಮಾನದಲ್ಲಿ ಮಹಿಳೆ ಪ್ರಯಾಣಿಸಬೇಕಿತ್ತು.

ಆದ್ರೆ ಆಕೆ ತಡವಾಗಿ ನಿಲ್ದಾಣಕ್ಕೆ ಬಂದಿದ್ದಾಳೆ. ವಿಮಾನ ಹೊರಡಲು 45 ನಿಮಿಷಕ್ಕಿಂತ್ಲೂ ಕಡಿಮೆ ಸಮಯವಿತ್ತು. ಹಾಗಾಗಿ ಆಕೆಗೆ ಬೋರ್ಡಿಂಗ್ ಗೆ ಅನುಮತಿ ನೀಡಲಿಲ್ಲ. ಇದೇ ವಿಚಾರಕ್ಕೆ ಏರ್ ಇಂಡಿಯಾ ಸಿಬ್ಬಂದಿ ಹಾಗೂ ಮಹಿಳೆ ಮಧ್ಯೆ ಮಾತಿನ ಚಕಮಕಿ ನಡೆದಿದೆ.

ಮಹಿಳೆ ಸಿಬ್ಬಂದಿಯ ಕಪಾಳಕ್ಕೆ ಬಾರಿಸಿದ್ದಾಳೆ. ಏರ್ ಇಂಡಿಯಾ ಸಿಬ್ಬಂದಿ ಕೂಡ ಸುಮ್ಮನಾಗಿಲ್ಲ, ತಾನೂ ಒಂದೇಟು ಕೊಟ್ಟಿದ್ದಾಳೆ. ಜಗಳ ವಿಕೋಪಕ್ಕೆ ಹೋಗಿದ್ದನ್ನು ನೋಡಿ ಕೂಡಲೇ ಪೊಲೀಸರನ್ನು ಸ್ಥಳಕ್ಕೆ ಕರೆಸಲಾಯ್ತು. ಪೊಲೀಸರು ಇಬ್ಬರ ಮಧ್ಯೆ ರಾಜಿ ಸಂಧಾನ ಮಾಡಿಸಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...