alex Certify
ಕನ್ನಡ ದುನಿಯಾ       Mobile App
       

Kannada Duniya

ತುಂಬಿದ ಸಭೆಯಲ್ಲಿ ಮಹಿಳೆಗೆ ಕೊಟ್ರು ಇಂತಹ ಶಿಕ್ಷೆ

ಮುಜಾಫರ್ ಪುರ್: ಬಿಹಾರದ ನಳಂದಾ ಜಿಲ್ಲೆಯಲ್ಲಿ ಕೇಳದೆ ಮುಖಂಡನ ಮನೆಯೊಳಗೆ ಹೋದ ಬಡ ವ್ಯಕ್ತಿಯನ್ನು ಚಪ್ಪಲಿಯಿಂದ ಹೊಡೆದು, ನೆಲದ ಮೇಲೆ ಉಗುಳಿ ಮತ್ತೆ ನೆಕ್ಕುವ ಶಿಕ್ಷೆ ನೀಡಲಾಗಿತ್ತು.

ಅದೇ ರೀತಿಯ ಮತ್ತೊಂದು ಘಟನೆ ಮುಜಾಫರ್ ಪುರ್ ಜಿಲ್ಲೆಯಲ್ಲಿ ಮರುಕಳಿಸಿದೆ. ಬಾಡಿಗೆಗಿದ್ದ ವ್ಯಕ್ತಿ ಬಾಡಿಗೆ ಕೊಡದ ಕಾರಣ ಮಹಿಳೆಯೊಬ್ಬರು ಪಂಚಾಯಿತಿಗೆ ದೂರು ನೀಡಿದ್ದಾರೆ. ಆದರೆ, ಬಾಡಿಗೆದಾರ, ಮಹಿಳೆಯೇ ನನಗೆ ದುಡ್ಡು ಕೊಡಬೇಕಿದೆ ಎಂದು ವಾದಿಸಿದ್ದಾನೆ.

ದೂರು ಕೊಟ್ಟ ಮಹಿಳೆಗೆ ಪಂಚಾಯಿತಿ ಮುಖಂಡರು ಶಿಕ್ಷೆ ನೀಡಿದ್ದಾರೆ. ಆಕೆಯನ್ನು ಧರಧರನೆ ಎಳೆದುಕೊಂಡು ಬಂದು, ಬಲವಂತವಾಗಿ ನೆಲದ ಮೇಲೆ ಉಗುಳಿಸಿ ಮತ್ತೆ ನೆಕ್ಕುವಂತೆ ಮಾಡಿದ್ದಾರೆ. ತುಂಬಿದ ಸಭೆಯಲ್ಲಿ ಮಹಿಳೆಯೊಂದಿಗೆ ಅಮಾನವೀಯವಾಗಿ ವರ್ತಿಸಿದ್ದಾರೆ.

ಮೀನಾಪುರ್ ಬ್ಲಾಕ್ ನ ಬಿಶುನ್ಪುರ್ ಪಂಚಾಯತ್ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಅಲ್ಲಿದ್ದವರೊಬ್ಬರು ಇದನ್ನು ಸೆರೆ ಹಿಡಿದ್ದಾರೆ. ಜಾಲತಾಣದಲ್ಲಿ ಈ ಅಮಾನವೀಯ ವರ್ತನೆಗೆ ಆಕ್ರೋಶ ವ್ಯಕ್ತವಾಗಿದೆ. ನೊಂದ ಮಹಿಳೆಗೆ ನ್ಯಾಯ ಕೊಡಿಸುವ ಬದಲು ಇಂತಹ ಕೆಲಸ ಮಾಡಲಾಗಿದೆ. ಅಲ್ಲಿದ್ದವರು ಕೂಡ ತಡೆಯುವ ಪ್ರಯತ್ನ ಮಾಡದಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ಹೇಳಲಾಗಿದೆ.

ಘಟನೆ ಗಮನಕ್ಕೆ ಬಂದಿದ್ದು, ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಡಿ.ಸಿ.ಪಿ. ಗೌರವ್ ಪಾಂಡ್ಯ ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...