alex Certify
ಕನ್ನಡ ದುನಿಯಾ       Mobile App
       

Kannada Duniya

4 ಸಾವಿರ ನಗದು, 4 ಕೆ.ಜಿ. ಅವರೆಕಾಳು ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ಲು

ಮಧ್ಯಪ್ರದೇಶದಲ್ಲಿ ಲಂಚ ವಿಚಾರಕ್ಕೆ ಸಂಬಂಧಿಸಿದಂತೆ ವಿಚಿತ್ರ ಪ್ರಕರಣವೊಂದು ಬೆಳಕಿಗೆ ಬಂದಿದೆ. ಮಹಿಳಾ ಅಧಿಕಾರಿಯೊಬ್ಬಳು ಲಂಚ ಸ್ವೀಕರಿಸುತ್ತಿರುವಾಗ ಲೋಕಾಯುಕ್ತ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾಳೆ.

ಘಟನೆ ಮಧ್ಯಪ್ರದೇಶದ ಗ್ವಾಲಿಯರ್ ನಲ್ಲಿ ನಡೆದಿದೆ. ನಾಲ್ಕು ಕೆ.ಜಿ. ಅವರೆಕಾಳು ಹಾಗೂ ನಾಲ್ಕು ಸಾವಿರ ರೂಪಾಯಿ ನಗದು ಸ್ವೀಕರಿಸುತ್ತಿದ್ದ ವೇಳೆ ಮಹಿಳಾ ಅಧಿಕಾರಿಯನ್ನು ಪೊಲೀಸರು ಬಂಧಿಸಿದ್ದಾರೆ. ನಂದ ಕಿಶೋರ್ ಎಂಬಾತನಿಂದ ಅನಿತಾ 8 ಸಾವಿರ ರೂಪಾಯಿ ಲಂಚ ಕೇಳಿದ್ದಳು ಎನ್ನಲಾಗಿದೆ. ಒಂದು ತಿಂಗಳು ಕೆಲಸ ಮಾಡದೆ ತೊಂದರೆ ನೀಡಿದ್ದ ಮಹಿಳೆ ಅನಿತಾ ನಾಲ್ಕು ಸಾವಿರ ನಗದು ಹಾಗೂ 4 ಕೆ.ಜಿ. ಅವರೆಕಾಳು ಪಡೆಯಲು ಒಪ್ಪಿದ್ದಳು.

ಈ ಬಗ್ಗೆ ನಂದಕಿಶೋರ್ ಲೋಕಾಯುಕ್ತರಿಗೆ ದೂರು ನೀಡಿದ್ದ. ಲೋಕಾಯುಕ್ತರ ಹೇಳಿಕೆ ಮೇರೆಗೆ ನಂದ ಕಿಶೋರ್ ಲಂಚ ನೀಡಿದ್ದಾನೆ. ಈ ವೇಳೆ ದಾಳಿ ನಡೆಸಿದ ಲೋಕಾಯುಕ್ತ ಅಧಿಕಾರಿಗಳು ಅನಿತಾಳನ್ನು ಬಂಧಿಸಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...