alex Certify
ಕನ್ನಡ ದುನಿಯಾ       Mobile App
       

Kannada Duniya

ಆಕೆ ಸತ್ತು ಬಿದ್ದಿದ್ರೆ ಜನರು ಮಾಡಿದ್ರು ನಾಚಿಕೆಗೇಡಿ ಕೆಲಸ..!

ಮಹಾರಾಷ್ಟ್ರದ ಜಲಗಾಂವ್ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಟ್ರಕ್ ಹಾಗೂ ಬೈಕ್ ನಡುವೆ ಡಿಕ್ಕಿಯಾಗಿ ಬೈಕ್ ನಲ್ಲಿದ್ದ ಮಹಿಳೆಯೊಬ್ಬಳು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾಳೆ. ಘಟನೆಯಲ್ಲಿ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಆದ್ರೆ ಸ್ಥಳದಲ್ಲಿ ನಾಚಿಕೆಗೇಡಿ ಘಟನೆ ನಡೆದಿದೆ.

ಅಪಘಾತದಲ್ಲಿ ಗಾಯಗೊಂಡಿದ್ದವರು ನೋವು ತಡೆಯಲಾಗದೆ ಕಿರುಚಾಡುತ್ತಿದ್ದರು. ಆದ್ರೆ ಗಾಯಗೊಂಡವರಿಗೆ ರಕ್ಷಣೆ ನೀಡುವ ಬದಲು ಸೇರಿದ್ದ ಸಾರ್ವಜನಿಕರ ಕಣ್ಣು ಮದ್ಯದ ಬಾಟಲಿ ಮೇಲಿತ್ತು. ಲಾರಿಯಲ್ಲಿದ್ದ ವೈನ್ ಬಾಟಲಿಯನ್ನು ಜನರು ಲೂಟಿ ಮಾಡುತ್ತಿದ್ದರು.

ಕೆಲ ಜನರು ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ಯಲು ನೆರವಾಗುವಂತೆ ಉಳಿದವರನ್ನು ಕೂಗುತ್ತಿದ್ದರು. ಆದ್ರೆ ಮದ್ಯದ ನಶೆಯಲ್ಲಿ ಗಾಯಾಳುಗಳ ನೋವು ಕಾಣಲಿಲ್ಲ. ಟ್ರಕ್ ನಲ್ಲಿದ್ದ ಬಾಟಲ್ ಖಾಲಿಯಾದ ಮೇಲೆ ವಾಸ್ತವಕ್ಕೆ ಬಂದ ಜನರು ಗಾಯಾಳುಗಳ ನೆರವಿಗೆ ಧಾವಿಸಿದ್ರು.

 

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...