alex Certify
ಕನ್ನಡ ದುನಿಯಾ       Mobile App
       

Kannada Duniya

ಪತ್ನಿ ಅಪಹರಣದ ಬಗ್ಗೆ ಪತಿ ದೂರು: ನಡೆದದ್ದು ಕೇಳಿ ಬೆಪ್ಪಾದ ಪೊಲೀಸ್

ಛತ್ತೀಸ್ಗಡದ ರಾಜಧಾನಿ ರಾಯ್ಪುರದಲ್ಲಿ ದಂಪತಿ ಪೊಲೀಸರ ಅಮೂಲ್ಯ ಸಮಯವನ್ನು ಹಾಳು ಮಾಡಿದ್ದಾರೆ. ಪತಿ ಪತ್ನಿ ಇಬ್ಬರ ನಡುವೆ ಜಗಳ ನಡೆದಿದೆ. ಕೋಪಗೊಂಡ ಪತ್ನಿ ಹೊರಗೆ ಹೋಗಿದ್ದಾಳೆ. ಗಂಟೆ ಕಳೆದ್ರೂ ಪತ್ನಿ ವಾಪಸ್ ಬರದಿರುವುದನ್ನು ನೋಡಿ ಕಂಗಾಲಾದ ಪತಿ ಅಪಹರಣದ ದೂರು ದಾಖಲಿಸಿದ್ದಾನೆ.

ಘಟನೆ ರಾಯ್ಪುರದ ಶಂಕರ್ ನಗರದಲ್ಲಿ ನಡೆದಿದೆ. ಪತ್ನಿ ಕಾಣದೆ ಕಂಗಾಲಾದ ಪತಿ ಮೊದಲು ಅಲ್ಲಿ-ಇಲ್ಲಿ ಹುಡುಕಿದ್ದಾನೆ. ನಂತ್ರ ಆಟೋದಲ್ಲಿ ಬಂದ ದುಷ್ಕರ್ಮಿಗಳು ಪತ್ನಿಯನ್ನು ಅಪಹರಿಸಿದ್ದಾರೆಂದು ದೂರು ನೀಡಿದ್ದಾನೆ. ಪತಿ ದೂರು ಬರ್ತಿದ್ದಂತೆ ಅಲರ್ಟ್ ಆದ ಪೊಲೀಸರು ಎಲ್ಲೆಡೆ ನಾಕಾಬಂಧಿ ಹಾಕಿದ್ದಾರೆ. ಆಟೋ ಸೇರಿದಂತೆ ಪ್ರತಿಯೊಂದು ವಾಹನಗಳನ್ನು ಚೆಕ್ ಮಾಡಿದ್ದಾರೆ.

ಸುಮಾರು 2 ಗಂಟೆ ನಂತ್ರ ಮಹಿಳೆ ಮೊಬೈಲ್ ಟವರ್ ಪತ್ತೆ ಹಚ್ಚಿದ ಪೊಲೀಸರು ಮಹಿಳೆಯನ್ನು ಪತ್ತೆ ಮಾಡಿದ್ದಾರೆ. ವಿಚಾರಣೆ ವೇಳೆ ಮಹಿಳೆ ಅಪಹರಣಕ್ಕೊಳಗಾಗಿರಲಿಲ್ಲ ಎಂಬ ಸತ್ಯ ಗೊತ್ತಾಗಿದೆ. ಪತಿ-ಪತ್ನಿ ನಡುವೆ ಗಲಾಟೆ ನಡೆದಿತ್ತು . ಮಧ್ಯರಾತ್ರಿಯವರೆಗೂ ಗಾರ್ಡನ್ ನಲ್ಲಿದ್ದೆ ಎಂದು ಆಕೆ ಒಪ್ಪಿಕೊಂಡಿದ್ದಾಳೆ. ಬುದ್ದಿವಾದ ಹೇಳಿದ ಪೊಲೀಸರು ದಂಪತಿಯನ್ನು ಮನೆಗೆ ಕಳುಹಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಅತಂತ್ರ ವಿಧಾನಸಭೆ ಸೃಷ್ಟಿಯಾದ ಬಳಿಕ ರಾಜ್ಯದಲ್ಲಿ ಆರಂಭವಾಗಿದೆಯಾ ಶಾಸಕರ ಕುದುರೆ ವ್ಯಾಪಾರ?

    View Results

    Loading ... Loading ...