alex Certify
ಕನ್ನಡ ದುನಿಯಾ       Mobile App
       

Kannada Duniya

ರೈಲಿನಲ್ಲಿ ಇಲಿ ಕಂಡ ವಕೀಲೆಗೆ ಸಿಗ್ತು 19 ಸಾವಿರ ರೂ.

ಮುಂಬೈ-ಎರ್ನಾಕುಲಂ ದುರೋಂಟೊ ರೈಲಿನಲ್ಲಿ ಇಲಿ ಕಂಡಿದೆ ಎಂದು ದೂರು ನೀಡಿದ್ದ ವಕೀಲೆಗೆ ಗ್ರಾಹಕ ನ್ಯಾಯಾಲಯ 19 ಸಾವಿರ ರೂಪಾಯಿ ಪರಿಹಾರ ನೀಡುವಂತೆ ಆದೇಶಿಸಿದೆ. ಕಳಪೆ ಸೇವೆಗೆ ಸೆಂಟ್ರಲ್ ರೈಲ್ವೆ ಹೊಣೆ ಎಂದು ಹೇಳಿದೆ. ಜನರು ಉತ್ತಮ ಸೇವೆಗಾಗಿ ಹಣ ನೀಡುತ್ತಾರೆ. ಹಣ ವಸೂಲಿ ಮಾಡುವ ರೈಲ್ವೆ ಇಲಾಖೆ ಉತ್ತಮ ಸೇವೆ ನೀಡಬೇಕೆಂದು ಗ್ರಾಹಕ ನ್ಯಾಯಾಲಯ ಹೇಳಿದೆ.

ರೈಲಿನಲ್ಲಿ ಇಲಿ ಕಾಣಿಸಿಕೊಂಡಿದೆ ಎಂದು 2015 ರಲ್ಲಿ ವಕೀಲೆ ಶೀತಲ್ ಹಾಗೂ ಸಂಬಂಧಿ ಹೇಮಾ ದೂರಿದ್ದರು. ದಕ್ಷಿಣ ಮುಂಬೈನ ಜಿಲ್ಲಾ ಗ್ರಾಹಕ ನ್ಯಾಯಾಲಯದಲ್ಲಿ 2015 ರಲ್ಲಿಯೇ ದೂರು ದಾಖಲಿಸಿದ್ದರು. ಸಿಬ್ಬಂದಿ ರೈಲಿನಲ್ಲಿ ಇಲಿ ಕಾಣಿಸಿಕೊಳ್ಳುವುದು ಸಾಮಾನ್ಯ ಸಂಗತಿ. ಇಷ್ಟು ದೊಡ್ಡ ರೈಲನ್ನು ಸ್ವಚ್ಛಗೊಳಿಸಲು ಮೂರು ದಿನ ಬೇಕು ಎಂದಿದ್ದರು.

ಸ್ವಚ್ಛತೆ ಸರಿಯಾದ ಸಮಯಕ್ಕೆ ನಡೆಯುತ್ತಿದೆ. ಶೌಚಾಲಯ ಹಾಗೂ ನೀರಿನ ಬಗ್ಗೆ ಬಂದ ದೂರನ್ನೂ ರೈಲ್ವೆ ಇಲಾಖೆ ತಳ್ಳಿಹಾಕಿದೆ. ಆದ್ರೆ ರೈಲ್ವೆ ಇಲಾಖೆ ಮಾತಿಗೆ ಮಾನ್ಯತೆ ನೀಡದ ಗ್ರಾಹಕ ನ್ಯಾಯಾಲಯ 19 ಸಾವಿರ ರೂಪಾಯಿ ದಂಡ ವಿಧಿಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...