alex Certify
ಕನ್ನಡ ದುನಿಯಾ       Mobile App
       

Kannada Duniya

ಎರಡು ಸಮೋಸಕ್ಕಾಗಿ ಮಗನನ್ನೇ ಹತ್ಯೆಗೈದ ತಾಯಿ

untitled-design-6-10

ಮಕ್ಕಳ ಹೊಟ್ಟೆ ತುಂಬಿದ್ರೆ ಅಮ್ಮನಾದವಳಿಗೆ ನೆಮ್ಮದಿ. ತನ್ನ ಪಾಲನ್ನೂ ಮಕ್ಕಳಿಗೆ ನೀಡಿ ಖುಷಿ ಪಡ್ತಾಳೆ ತಾಯಿ. ಆದ್ರೆ ಇಲ್ಲೊಂದು ತಾಯಿ, ಎರಡು ಸಮೋಸಾ ಆಸೆಗೆ ಮಗನನ್ನೇ ಹತ್ಯೆ ಮಾಡಿದ್ದಾಳೆ.

ಯಸ್. ನಂಬಲಸಾಧ್ಯವಾದ ಘಟನೆ ನಡೆದಿರುವುದು ಬರೇಲಿಯಲ್ಲಿ. ಆರು ವರ್ಷದ ಸೈಫ್ ನ ಮಲತಾಯಿ ತಬಸ್ಸುಮ್ ಮಗನನ್ನೇ ಹತ್ಯೆಗೈದಿದ್ದಾಳೆ. ಅದು ಕೇವಲ ಎರಡು ಸಮೋಸಕ್ಕಾಗಿ. ತಬಸ್ಸುಮ್ ಎರಡು ಸಮೋಸಾ ತರಿಸಿಕೊಂಡಿದ್ದಳು. ಅದನ್ನು ಸೈಫ್ ತಿಂದಿದ್ದಾನೆ. ಇದರಿಂದ ಕೋಪಗೊಂಡ ಮಲತಾಯಿ ಸೈಫ್ ನನ್ನು ಹತ್ಯೆಗೈದಿದ್ದಾಳೆ.

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಮಲತಾಯಿಯನ್ನು ಬಂಧಿಸಿದ್ದಾರೆ. ಇಡೀ ಕುಟುಂಬವೇ ಈ ಘಟನೆಯಿಂದ ಆಘಾತಗೊಂಡಿದೆ. ಮಲತಾಯಿಯಾಗಿರಲಿ ಇಲ್ಲ ಬೇರೆ ಯಾರೋ, ಕೇವಲ ಎರಡು ಸಮೋಸಕ್ಕಾಗಿ ಕೊಲೆ ಮಾಡ್ತಾರಾ ಎಂಬ ಪ್ರಶ್ನೆ ಎಲ್ಲರನ್ನು ಕಾಡ್ತಾ ಇದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...