alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರೇಮಿಗಾಗಿ ಪತಿಯನ್ನು ಕೊಂದು ಮನೆಯಲ್ಲಿ ಹೂಳಿದ್ಲು 4 ಮಕ್ಕಳ ತಾಯಿ

ಉತ್ತರ ಪ್ರದೇಶದ ಬಾರಾಬಂಕಿಯಲ್ಲಿ ನಾಲ್ಕು ಮಕ್ಕಳ ತಾಯಿ ಪ್ರೇಮಿಗಾಗಿ ಪತಿಯನ್ನು ಹತ್ಯೆಗೈದಿದ್ದಾಳೆ. ಘಟನೆ 8 ತಿಂಗಳ ನಂತ್ರ ಬಹಿರಂಗವಾಗಿದೆ. ಪತಿಯನ್ನು ಹತ್ಯೆಗೈದು ಮನೆಯಲ್ಲಿಯೇ ಹೂಳಿದ್ದ ಪತ್ನಿ, ಪ್ರೇಮಿ ಜೊತೆ ಹೋಗಿದ್ದಳು. ನಾಲ್ಕು ದಿನಗಳ ಹಿಂದೆ ಮಹಿಳೆ ಹಿರಿಯ ಮಗ ಧಾನ್ಯ ತೆಗೆದುಕೊಂಡು ಹೋಗಲು ಅಜ್ಜಿ ಮನೆಯಿಂದ ಅಪ್ಪನ ಮನೆಗೆ ಬಂದಾಗ ವಿಷ್ಯ ಗೊತ್ತಾಗಿದೆ.

ಅನಿರುದ್ಧ ಗೋಸ್ವಾಮಿ ಕಳೆದ 8 ತಿಂಗಳಿಂದ ನಾಪತ್ತೆಯಾಗಿದ್ದ. ಈತನ ಪತ್ನಿ ರೀಟಾ ಸೇರಿದಂತೆ ಕುಟುಂಬಸ್ಥರು ಯಾವುದೇ ದೂರನ್ನು ಸಲ್ಲಿಸಿರಲಿಲ್ಲ. 18 ವರ್ಷದ ಮೊದಲ ಮಗ 8 ತಿಂಗಳ ನಂತ್ರ ಮನೆಗೆ ಬಂದಿದ್ದ. ಮನೆಯಿಂದ ಕೆಟ್ಟ ವಾಸನೆ ಬರ್ತಾಯಿತ್ತು. ಈ ಬಗ್ಗೆ ಪೊಲೀಸರಿಗೆ ತಿಳಿಸಿದ್ದಾನೆ. ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದಾಗ ಅನಿರುದ್ಧ ಮೃತದೇಹ ಸಿಕ್ಕಿದೆ.

ಘಟನೆ ನಡೆದ ಒಂದು ತಿಂಗಳ ಹಿಂದೆ ರೀಟಾ ಹಾಗೂ ಅದೇ ಗ್ರಾಮದ ಅಜಯ್ ಪ್ರೀತಿ ವಿಷ್ಯ ಅನಿರುದ್ಧ್ ಗೆ ತಿಳಿದಿತ್ತು. ಇದೇ ವಿಚಾರಕ್ಕೆ ಅನಿರುದ್ಧ್ ರೀಟಾಗೆ ಹೊಡೆಯುತ್ತಿದ್ದ. ಪ್ರೀತಿಗೆ ಅಡ್ಡ ಬಂದ ಪತಿಯನ್ನು ಕೊಲೆ ಮಾಡಲು ರೀಟಾ ಪ್ಲಾನ್ ಮಾಡಿದ್ದಳು. ಮಕ್ಕಳು ಮನೆಯಲ್ಲಿಲ್ಲದ ವೇಳೆ ಅಜಯ್ ನನ್ನು ಮನೆಗೆ ಕರೆದು ಪತಿ ಕೊಲೆ ಮಾಡಿ ಮನೆಯಲ್ಲಿ ಹೂಳಿದ್ದಳು. ಮರುದಿನ ನನಗೆ ಹೊಡೆದು ಪತಿ ಓಡಿ ಹೋಗಿದ್ದಾನೆಂದು ನಾಟಕವಾಡಿದ್ದಳು. ಆ ನಂತ್ರ ಆಕೆ ಮನೆ ಬಿಟ್ಟಿದ್ದಳು ಎನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...