alex Certify
ಕನ್ನಡ ದುನಿಯಾ       Mobile App
       

Kannada Duniya

ಪತಿಯ ವಿಮೆ ಹಣ ಪಡೆಯಲು ಪತ್ನಿ ಮಾಡಿದ್ದೇನು ಗೊತ್ತಾ?

ಗಂಡನ ಮೇಲಿನ ದ್ವೇಷ ಮತ್ತು ಆತನ ವಿಮಾ ಹಣವನ್ನು ಪಡೆಯುವ ಉದ್ದೇಶದೊಂದಿಗೆ ಮಹಿಳೆಯೊಬ್ಬಳು ಡ್ರೈವರ್ ಜೊತೆ ಸೇರಿಕೊಂಡು ತನ್ನ ಪತಿಯನ್ನೇ ಕೊಲೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.

43 ವರ್ಷದ ಕೇಶ್ಯಾ ನಾಯಕ್ ಎಂಬ ವ್ಯಕ್ತಿಯನ್ನ ಆತನ ಪತ್ನಿ ಪದ್ಮಾ ಮತ್ತು ಕಾರು ಚಾಲಕ ವಿನೋದ್ ಎಂಬುವವರು ಸೇರಿ ಕೊಲೆ ಮಾಡಿದ ಆರೋಪವನ್ನು ಈಗ ಎದುರಿಸ್ತಿದ್ದಾರೆ.

ಕೇಶ್ಯಾ ನಾಯಕ್ ಅಂಚೆ ಇಲಾಖೆ ನೌಕರರಾಗಿದ್ದು, 20 ವರ್ಷಗಳ ಹಿಂದೆ ಆತ ಪದ್ಮಾರನ್ನು ವಿವಾಹವಾಗಿದ್ದ. ಅಲ್ಲದೇ ಕೇಶ್ಯಾ ನಾಯಕ್ ಎರಡನೇ ಮದುವೆ ಆಗಿದ್ದೇ ಪದ್ಮಾಗೆ ಗಂಡನ ವಿರುದ್ಧ ದ್ವೇಷ ಹುಟ್ಟೋದಕ್ಕೆ ಕಾರಣವಾಯ್ತಂತೆ.

ಆತನನ್ನ ಕೊಲೆ ಮಾಡಿ ಇನ್ಶುರೆನ್ಸ್ ಹಣದ ಜೊತೆಗೆ ಕೆಲಸವನ್ನೂ ಪಡೆಯಬಹುದು ಅಂತ ಪದ್ಮಾ ಸಂಚು ರೂಪಿಸಿದ್ದಾಳೆ. ಅದಕ್ಕಾಗಿಯೇ ಪದ್ಮಾ ತನ್ನ ಪತಿಯ ಕಾರ್ ಡ್ರೈವರ್ ವಿನೋದ್ ನ ಸಹಾಯ ಪಡಿದಿದ್ದಾಳೆ. 10 ಲಕ್ಷ ರೂಪಾಯಿ ಆಸೆ ತೋರಿಸಿ ವಿನೋದ್ ನನ್ನೂ ಈ ಕೃತ್ಯದಲ್ಲಿ ಶಾಮೀಲು ಮಾಡಿಕೊಡಿದ್ದಾಳೆ.

ಸೆಪ್ಟೆಂಬರ್ 1ರ ರಾತ್ರಿ ಕೇಶ್ಯಾಗೆ ಚೆನ್ನಾಗಿ ಮದ್ಯಪಾನ ಮಾಡಿಸಿ ಉಸಿರುಗಟ್ಟಿಸಿ ಕೊಲೆ ಮಾಡಿ ಕಾರನ್ನು ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆಸಿ ಅಪಘಾತದ ರೀತಿಯಲ್ಲಿ ಸಾವು ಸಂಭವಿಸಿದೆ ಅಂತ ಬಿಂಬಿಸೋಕೆ ಪ್ರಯತ್ನಿಸಿದ್ದರು. ಆದ್ರೆ ವಿಚಾರಣೆಯ ವೇಳೆ ಪೊಲೀಸರು ಅಸಲಿ ವಿಚಾರವನ್ನು ಬಯಲಿಗೆಳೆದಿದ್ದಾರೆ. ಪದ್ಮಾ ಮತ್ತು ವಿನೋದ್ ನನ್ನ ಬಂಧಿಸಿರುವ ಪೊಲೀಸರು ಕಂಬಿ ಹಿಂದೆ ಕಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...