alex Certify
ಕನ್ನಡ ದುನಿಯಾ       Mobile App
       

Kannada Duniya

ವಧುವಿನ ತಂದೆ ಹಾರಿಸಿದ ಗುಂಡಿಗೆ ನೆರೆಮನೆ ಯುವತಿ ಬಲಿ

ಮಗಳ ವಿವಾಹದ ಸಂಭ್ರಮದಲ್ಲಿ ವಧುವಿನ ತಂದೆ ಹಾರಿಸಿದ ಗುಂಡಿಗೆ ನೆರೆಮನೆಯ ಯುವತಿ ಬಲಿಯಾದ ದಾರುಣ ಘಟನೆ ಪಂಜಾಬ್ ನ ಹೋಶಿಯಾರ್ಪುರ್ ನಲ್ಲಿ  ಶನಿವಾರದಂದು ನಡೆದಿದೆ.

ಚರಣ್ಜಿತ್ ಅರೋರಾ ಎಂಬವರ ಪುತ್ರಿ 22 ವರ್ಷದ ಸಾಕ್ಷಿ ಅರೋರಾ ಮೃತಪಟ್ಟ ಯುವತಿಯಾಗಿದ್ದು, ಈಕೆ ಜಲಂದರ್ ನ ಕಾಲೇಜೊಂದರಲ್ಲಿ ಎಂಬಿಎ ಅಂತಿಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದಳೆಂದು ತಿಳಿದುಬಂದಿದೆ.

ಹೋಶಿಯಾರ್ಪುರದ ಅಶೋಕ್ ಖೋಸ್ಲಾ ಎಂಬಾತ ತನ್ನ ಮಗಳ ಮದುವೆ ಸಂಭ್ರಮಕ್ಕಾಗಿ ಮನೆಯಲ್ಲಿ ಡಿಜೆ ಪಾರ್ಟಿ ಏರ್ಪಡಿಸಿದ್ದ. ತಡರಾತ್ರಿಯವರೆಗೂ ಈ ಪಾರ್ಟಿ ನಡೆಯುತ್ತಿದ್ದು, ಸಾಕ್ಷಿ ಅರೋರಾ ತನ್ನ ಮನೆಯ ಮಹಡಿ ಮೇಲೆ ನಿಂತು ಇದನ್ನು ವೀಕ್ಷಿಸುತ್ತಿದ್ದಳೆನ್ನಲಾಗಿದೆ.

ಆಗ ಇದ್ದಕ್ಕಿದ್ದಂತೆ ಹಾರಿ ಬಂದ ಗುಂಡು ಆಕೆಯ ಹಣೆಗೆ ಹೊಕ್ಕಿದ್ದು, ಸಾಕ್ಷಿ ಅರೋರಾ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಮದ್ಯದ ಅಮಲಿನಲ್ಲಿದ್ದ ಅಶೋಕ್ ಖೋಸ್ಲಾ ಹಾಗೂ ಆತನ ಸ್ನೇಹಿತ ಅಶೋಕ್ ಸೇಥಿ ಬಂದೂಕಿನಿಂದ ಗುಂಡು ಹಾರಿಸಿದ್ದು, ಇದು ತಗುಲಿ ಸಾಕ್ಷಿ ಅರೋರಾ ಸಾವನ್ನಪ್ಪಿದ್ದಾಳೆ.

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಅಶೋಕ್ ಖೋಸ್ಲಾನನ್ನು ಬಂಧಿಸಿ ಆತನಿಂದ ಲೈಸೆನ್ಸ್ ಹೊಂದಿದ್ದ .32 ಬೋರ್ ರಿವಾಲ್ವರ್ ವಶಪಡಿಸಿಕೊಂಡಿದ್ದಾರೆ. ಡಬ್ಬಲ್ ಬ್ಯಾರೆಲ್ ಗನ್ ನಿಂದ ಗುಂಡು ಹಾರಿಸುತ್ತಿದ್ದ ಆತನ ಸ್ನೇಹಿತ ಅಶೋಕ್ ಸೇಥಿ ಪರಾರಿಯಾಗಿದ್ದು, ಆತನ ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...