alex Certify
ಕನ್ನಡ ದುನಿಯಾ       Mobile App
       

Kannada Duniya

ಆಕೆಯ ತಪ್ಪಿನಿಂದ ಕೋರ್ಟ್ ಆವರಣದಲ್ಲೇ ಯಡವಟ್ಟಾಯ್ತು

bomb bihar 18

ಪಾಟ್ನಾ: ಯಾವುದೇ ವಸ್ತುಗಳನ್ನು ಬಳಸುವ ಬಗ್ಗೆ ತಿಳಿದಿರಬೇಕು ಇಲ್ಲದಿದ್ದರೆ, ಯಡವಟ್ಟುಗಳಾಗುತ್ತವೆ ಎಂಬುದಕ್ಕೆ ಈ ಪ್ರಕರಣ ಉದಾಹರಣೆಯಾಗುವಂತಿದೆ. ಮಹಿಳೆಯೊಬ್ಬಳು, ಎದುರಾಳಿಗಳ ಮೇಲೆ ಹಾಕಲು ತಂದಿದ್ದ ಬಾಂಬ್ ಆಕಸ್ಮಿಕವಾಗಿ ಸ್ಟೋಟಗೊಂಡಿದೆ.

ಬಿಹಾರದ ಸರನ್ ಜಿಲ್ಲೆ ಚಾಪ್ರಾ ನ್ಯಾಯಾಲಯದಲ್ಲಿ ಈ ಘಟನೆ ಸಂಭವಿಸಿದೆ. ಖಷ್ಬು ಕುಮಾರಿ ಎಂಬ ಮಹಿಳೆ ಎರಡು ಪ್ರಕರಣದಲ್ಲಿ ಜೈಲು ಸೇರಿದ್ದು, ಕೆಲವು ದಿನಗಳ ಹಿಂದಷ್ಟೇ ಜಾಮೀನು ಪಡೆದು ಬಿಡುಗಡೆಯಾಗಿದ್ದಳು. ತನ್ನನ್ನು ಜೈಲಿಗೆ ಕಳಿಸಿದವರನ್ನು ಕೊಲೆ ಮಾಡಬೇಕೆಂದು ಪ್ಲಾನ್ ಮಾಡಿದ ಖುಷ್ಬು ಕುಮಾರಿ, ಅವರ ಮೇಲೆ ಬಾಂಬ್ ಎಸೆಯಲು ಮುಂದಾಗಿದ್ದಾಳೆ. ಅದರಂತೆ, ತನ್ನನ್ನು ಜೈಲಿಗೆ ಕಳಿಸಿದ್ದ, ಶಶಿಭೂಷಣ್ ಹಾಗೂ ಇತರರ ಮೇಲೆ ಬಾಂಬ್ ಹಾಕಲು ಕೋರ್ಟ್ ಗೆ ಬಂದಿದ್ದಾಳೆ.

ಆದರೆ, ಆಕೆ ಬಾಂಬ್ ಹಾಕುವ ಮೊದಲೇ, ಕೈಯಲ್ಲಿದ್ದ ಬಾಂಬ್ ಸ್ಪೋಟಗೊಂಡಿದ್ದು, ಖುಷ್ಬುಕುಮಾರಿ ತೀವ್ರವಾಗಿ ಗಾಯಗೊಂಡಿದ್ದಾಳೆ. ಆಕೆಯನ್ನು, ಪಾಟ್ನಾ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಸೇರಿಸಲಾಗಿದೆ. ಘಟನೆಯಲ್ಲಿ ಮಹಿಳೆ ಮತ್ತು ಅಪ್ರಾಪ್ತೆಯೊಬ್ಬಳು ಗಾಯಗೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...