alex Certify
ಕನ್ನಡ ದುನಿಯಾ       Mobile App
       

Kannada Duniya

ಕಾರು ಗುದ್ದಿ, ಮಹಿಳೆ ಸಾವಿಗೆ ಕಾರಣವಾದ ಉದ್ಯಮಿ ಮಗಳಿಗೆ ಸಿಕ್ತು ಜಾಮೀನು

ರಾಷ್ಟ್ರರಾಜಧಾನಿ ದೆಹಲಿಯ ಐಷಾರಾಮಿ ಪ್ರದೇಶ ಕನಾಟ್ ಪ್ಲೇಸ್ ನಲ್ಲಿ ಆಘಾತಕಾರಿ ಘಟನೆ ನಡೆದಿದೆ. ಮಹಿಳೆಯೊಬ್ಬಳು ತನ್ನ ಎಸ್ಯುವಿ ಕಾರನ್ನು ಇನ್ನೊಬ್ಬ ಮಹಿಳೆಗೆ ಡಿಕ್ಕಿ ಹೊಡೆಸಿದ್ದಲ್ಲದೆ ಕಾರಿಗೆ ಸಿಕ್ಕಿಬಿದ್ದ ಮಹಿಳೆಯನ್ನು ರಕ್ಷಿಸದೆ 100 ಮೀಟರ್ ಎಳೆದೊಯ್ದಿದ್ದಾಳೆ.

ಸೋಮವಾರ ರಾತ್ರಿ 9 ಗಂಟೆ ಸುಮಾರಿಗೆ ಘಟನೆ ನಡೆದಿದೆ. ವಿದ್ಯಾರ್ಥಿನಿಯೊಬ್ಬಳು ತಪ್ಪು ಮಾರ್ಗದಲ್ಲಿ ಎಸ್ಯುವಿ ಕಾರು ಚಲಾಯಿಸಿದ್ದಾಳೆ. ಈ ವೇಳೆ ಮಹಿಳೆಯೊಬ್ಬಳಿಗೆ ಡಿಕ್ಕಿ ಹೊಡೆದಿದ್ದಾಳೆ. ಆತಂಕದಲ್ಲಿ ಅಲ್ಲಿಂದ ಪರಾರಿಯಾಗಲು ಮುಂದಾದ ವಿದ್ಯಾರ್ಥಿನಿ ಕಾರಿನ ವೇಗ ಹೆಚ್ಚಿಸಿದ್ದಾಳೆ. ಇದನ್ನು ನೋಡಿದ ಪೊಲೀಸರು ಬ್ಯಾರಿಕೇಡ್ ಹಾಕಿ ಕಾರು ನಿಲ್ಲಿಸಿದ್ದಾರೆ. ಆದ್ರೆ ಅಷ್ಟರಲ್ಲೇ ಮಹಿಳೆ ಸಾವನ್ನಪ್ಪಿದ್ದಳಂತೆ.

ಆರೋಪಿ ವಿದ್ಯಾರ್ಥಿನಿ ಫ್ಯಾಷನ್ ಡಿಸೈನಿಂಗ್ ಕಲಿಯುತ್ತಿದ್ದಾಳಂತೆ. ಉತ್ತರ ಪ್ರದೇಶ ಬರೇಲಿಯ ದೊಡ್ಡ ಉದ್ಯಮಿಯ ಮಗಳಂತೆ. ಆರೋಪಿ ವಿದ್ಯಾರ್ಥಿನಿ ಶ್ರೇಯಾ ವಯಸ್ಸು 20 ಎನ್ನಲಾಗಿದೆ. ಮೃತ ಮಹಿಳೆ 50 ವರ್ಷದವಳಾಗಿದ್ದು, ಭಿಕ್ಷೆ ಬೇಡಿ ಜೀವನ ಸಾಗಿಸುತ್ತಿದ್ದಳು. ವಿದ್ಯಾರ್ಥಿನಿ ಕಾರಿನಲ್ಲಿ ಇನ್ನೂ ಇಬ್ಬರಿದ್ದರು ಎನ್ನಲಾಗಿದೆ. ಪ್ರಕರಣ ದಾಖಲಿಸಿಕೊಂಡು ಪೊಲೀಸರು ಹುಡುಗಿಯನ್ನು ಬಂಧಿಸಿದ್ದರು. ಆದ್ರೆ ಕೆಲವೇ ಗಂಟೆಯಲ್ಲಿ ಜಾಮೀನು ಸಿಕ್ಕಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...