alex Certify
ಕನ್ನಡ ದುನಿಯಾ       Mobile App
       

Kannada Duniya

ಹಾವನ್ನೂ ಸೇರಿಸಿ ಚಟ್ನಿ ರುಬ್ಬಿದ ಮಹಿಳೆ

havu-chatni

ಮೆಹಬೂಬ್ ನಗರ: ಚಟ್ನಿ ರುಬ್ಬುವ ಸಂದರ್ಭದಲ್ಲಿ ಗಮನಿಸದ ಮಹಿಳೆ ಹಾವನ್ನೂ ಸೇರಿಸಿ ರುಬ್ಬಿದ್ದಾಳೆ. ಮಾತ್ರವಲ್ಲ ಮಗಳೊಂದಿಗೆ ಸೇರಿ ಚಟ್ನಿಯನ್ನು ತಿಂದಿದ್ದಾಳೆ.

ಮಗ ಊಟ ಮಾಡುವಾಗ ಚಟ್ನಿಯಲ್ಲಿ ಹಾವಿನ ಬಾಲ ಸಿಕ್ಕಿದ್ದು, ಚಟ್ನಿ ತಿಂದವರೆಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ.

ತೆಲಂಗಾಣದ ಮೆಹಬೂಬ್ ನಗರ ಜಿಲ್ಲೆಯ ವಾನಪರ್ತಿ ಸಮೀಪದ ಕಿಲ್ಲಾ ಗಾನಾಪುರ್ ನಿವಾಸಿ ಗೊಲ್ಲ ರಾಜಮ್ಮ ಅವರು ಮನೆಯಲ್ಲಿ ಚಟ್ನಿ ರುಬ್ಬುವಾಗ ರುಬ್ಬುವ ಕಲ್ಲಿನೊಳಗಿದ್ದ ಹಾವನ್ನು ಗಮನಿಸಿಲ್ಲ. ಟೊಮ್ಯಾಟೊ ಚಟ್ನಿಗೆ ಸಿದ್ಧ ಮಾಡಿಟ್ಟುಕೊಂಡ ಪದಾರ್ಥಗಳನ್ನು ರುಬ್ಬುವ ಕಲ್ಲಿನೊಳಗೆ ಹಾಕಿ ರುಬ್ಬಿದ್ದಾರೆ.

ನಂತರ ಅಡುಗೆ ಸಿದ್ಧಪಡಿಸಿ, ಮಕ್ಕಳೊಂದಿಗೆ ಊಟ ಮಾಡಿ ಹೊಲಕ್ಕೆ ಹೋಗಿದ್ದಾರೆ. ಹೊಲದಲ್ಲಿ ದೊಡ್ಡ ಮಗನಿಗೆ ರಾಜಮ್ಮ ಊಟ ಬಡಿಸಿದ್ದು, ಅದನ್ನು ತಿನ್ನುತ್ತಿದ್ದವನಿಗೆ ಹಾವಿನ ಬಾಲ ಕಾಣಿಸಿದೆ.

ಕೊನೆಗೆ ಗಮನಿಸಿದಾಗ, ಚಟ್ನಿಯಲ್ಲಿ ಹಾವಿನ ದೇಹದ ಚೂರು ಕಂಡು ಬಂದಿವೆ. ಚಟ್ನಿ ತಿಂದ ಕುಟುಂಬದವರೆಲ್ಲಾ ಆಸ್ಪತ್ರೆಗೆ ದಾಖಲಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...