alex Certify
ಕನ್ನಡ ದುನಿಯಾ       Mobile App
       

Kannada Duniya

10 ನಿಮಿಷದಲ್ಲಿ 4 ಮಕ್ಕಳಿಗೆ ಜನ್ಮ ನೀಡಿದ ಮಹಾತಾಯಿ !

quadruplets

ಪಾಟ್ನಾ: ಗರ್ಭಿಣಿಯರು ಒಂದು ಅಥವಾ ಅವಳಿ ಮಕ್ಕಳಿಗೆ ಜನ್ಮ ನೀಡುವುದು ಸಾಮಾನ್ಯ, ಕೆಲವೊಮ್ಮೆ ಎರಡಕ್ಕಿಂತ ಹೆಚ್ಚು ಮಕ್ಕಳಿಗೆ ಜನ್ಮ ನೀಡಿದ ಉದಾಹರಣೆಗಳಿವೆ. ಅಪರೂಪಕ್ಕೊಮ್ಮೆ ಇಂತಹ ಪ್ರಕರಣ ನಡೆಯುತ್ತವೆ. ಇಂತಹ ಒಂದು ಪ್ರಕರಣ ಬಿಹಾರದಲ್ಲಿ ನಡೆದಿದೆ.

ಬಿಹಾರದ ಧನ್ ಬಾದ್ ಜಿಲ್ಲೆಯ ಖಾಸಗಿ ಆಸ್ಪತ್ರೆಯೊಂದರಲ್ಲಿ ಗರ್ಭಿಣಿಯೊಬ್ಬರು 10 ನಿಮಿಷದ ಅವಧಿಯಲ್ಲಿ 4 ಮಕ್ಕಳಿಗೆ ಜನ್ಮ ನೀಡಿದ್ದಾರೆ. ಧನಬಾದ್ ಜಿಲ್ಲೆಯ ಕತರಾಸ್ ಗ್ರಾಮದ 25 ವರ್ಷದ ಗರ್ಭಿಣಿಯನ್ನು ಹೆರಿಗೆ ನೋವಿನ ಕಾರಣದಿಂದ ಆಸ್ಪತ್ರೆಗೆ ಸೇರಿಸಲಾಗಿತ್ತು. ಆಕೆ 4 ಮಕ್ಕಳಿಗೆ ಜನ್ಮ ನೀಡಿದ್ದು, ತಾಯಿ- ಮಕ್ಕಳು ಆರೋಗ್ಯವಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ತಾಯಿಯ ಎತ್ತರ ಕಡಿಮೆಯಾಗಿದ್ದ ಕಾರಣ ಗರ್ಭಾವಸ್ಥೆಯಲ್ಲಿ ತೀರಾ ತೊಂದರೆಯಾಗಿತ್ತು ಎಂದು ಆಸ್ಪತ್ರೆಯ ವೈದ್ಯ ಡಾ. ವಿಕಾಸ್ ಹಜಾರ್ ತಿಳಿಸಿದ್ದಾರೆ.

ಸಿಸೇರಿಯನ್ ಮೂಲಕ ಮಕ್ಕಳನ್ನು ಹೊರ ತೆಗೆಯಲಾಗಿದೆ. ಎರಡು ಹೆಣ್ಣು ಹಾಗೂ ಎರಡು ಗಂಡು ಮಕ್ಕಳು ಜನಿಸಿವೆ. ಕ್ರಮವಾಗಿ 1.1 ಕೆಜಿ, 950 ಗ್ರಾಂ, 925 ಗ್ರಾಂ, 900 ಗ್ರಾಂ ತೂಕವಿದ್ದು, ಆರೋಗ್ಯವಾಗಿವೆ ಎಂದು ವೈದ್ಯರಾದ ಡಾ. ವಿಕಾಸ್ ಹಜಾರ್ ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...