alex Certify
ಕನ್ನಡ ದುನಿಯಾ       Mobile App
       

Kannada Duniya

ಮನೆಯಲ್ಲೇ 12 ನೇ ಮಗುವಿಗೆ ಜನ್ಮ ನೀಡಿದ ‘ಮಹಾತಾಯಿ’

ಕಾಲ ಬೆಳೆಯುತ್ತಿದೆ. ಆಧುನಿಕ ತಂತ್ರಜ್ಞಾನ ನಾಗಾಲೋಟದಲ್ಲಿದೆ. ಆದರೆ, ಕೆಲವರು ಮಾತ್ರ ಈಗಿನ ಜಗತ್ತಿಗೂ, ನಮಗೂ ಸಂಬಂಧವೇ ಇಲ್ಲವೆನ್ನುವಂತೆ ಬದುಕುತ್ತಿದ್ದಾರೆ. ಇದಕ್ಕೆ ಉದಾಹರಣೆಯಾಗಿ ಇಲ್ಲೊಬ್ಬಳು ಮಹಾತಾಯಿ ತನ್ನ 12ನೇ ಮಗುವಿಗೂ ಮನೆಯಲ್ಲೇ ಜನ್ಮ ನೀಡಿದ್ದಾಳೆ!

ಹೌದು. ಇದು ನಡೆದಿರುವುದು ತಮಿಳುನಾಡಿನ ಮುಸಿರಿ ಎಂಬಲ್ಲಿ. 45 ವರ್ಷದ ಶಾಂತಿ ಎಂಬ ಕಾರ್ಮಿಕ ಮಹಿಳೆಯೇ ತನ್ನ 12ನೇ ಮಗುವನ್ನು ಮನೆಯಲ್ಲೇ ಹೆತ್ತಿರುವುದು. ಹೀಗಾಗಿ ಆಸ್ಪತ್ರೆಗೆ ಹೋಗುವ ಪ್ರಮೇಯವೇ ಬರಲಿಲ್ಲ ಎನ್ನುತ್ತಾಳೆ ಶಾಂತಿ. ಸರಿಸುಮಾರು 20 ವರ್ಷದಿಂದ ಮಕ್ಕಳನ್ನು ಹೆರುತ್ತಿರುವ ಶಾಂತಿಯ 12 ಮಕ್ಕಳಲ್ಲಿ 3 ಮಕ್ಕಳು ಪೌಷ್ಟಿಕತೆ ಕೊರತೆಯಿಂದ ಅಸುನೀಗಿವೆ ಎಂದು ಹೇಳಲಾಗಿದೆ.

ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿರುವ ಆರೋಗ್ಯ ಇಲಾಖೆ ಅಧಿಕಾರಿಗಳು, ಶಾಂತಿ ಮತ್ತು ಆಕೆಯ ಪತಿಯ ಮನವೊಲಿಕೆ ಮುಂದಾಗಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಶಾಂತಿ ಪತಿ ಕಣ್ಣನ್, ಮಕ್ಕಳು ದೇವರು ಕೊಡುವ ಉಡುಗೊರೆ. ಹಾಗಾಗಿ ನಾನು ಯಾವುದೇ ಕಾರಣಕ್ಕೂ ಸಂತಾನಶಕ್ತಿಹರಣ ಶಸ್ತ್ರ ಚಿಕಿತ್ಸೆಗೆ ಒಳಗಾಗುವುದಿಲ್ಲ ಎಂದು ಹೇಳಿಕೊಂಡಿದ್ದಾನೆ.

ಕೊನೆಗೆ ಲ್ಯಾಪರೊಸ್ಕೋಪಿಕ್ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವಂತೆ ಶಾಂತಿ ಮನವೊಲಿಸುವಲ್ಲಿ ಅಧಿಕಾರಿಗಳು ಸಫಲರಾಗಿದ್ದಾರೆ. ಈ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವುದರಿಂದ ಆಗುವ ಅನುಕೂಲಗಳ ಬಗ್ಗೆ ತಿಳಿಹೇಳಿದಾಗ ಒಪ್ಪಿಗೆ ಸೂಚಿಸಿದ್ದಾರೆಂದು ಅಧಿಕಾರಿಗಳು ಹೇಳಿಕೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...