alex Certify
ಕನ್ನಡ ದುನಿಯಾ       Mobile App
       

Kannada Duniya

29ರ ಪತ್ನಿಗೆ ವಾಟ್ಸಾಪ್ ನಲ್ಲಿ ತಲಾಕ್ ನೀಡಿದ 62ರ ಪತಿ

ತ್ರಿವಳಿ ತಲಾಕ್ ಮೇಲೆ ನಿಷೇಧ ಹೇರಿದ್ದರೂ ದೇಶದಲ್ಲಿ ತ್ರಿವಳಿ ತಲಾಕ್ ಪ್ರಕರಣ ನಿಂತಿಲ್ಲ. 29 ವರ್ಷದ ಮಹಿಳೆಯೊಬ್ಬಳು 62 ವರ್ಷ ವಯಸ್ಸಿನ ಪತಿ ವಿರುದ್ಧ ದೂರು ನೀಡಿದ್ದಾಳೆ. ಪತಿ  ವಾಟ್ಸಾಪ್ ನಲ್ಲಿ ತಲಾಕ್ ನೀಡಿದ್ದಾನೆಂದು ದೂರಿದ್ದಾಳೆ. ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಗೆ ನೆರವಾಗುವಂತೆ ಮನವಿ ಸಲ್ಲಿಸಿದ್ದಾಳೆ.

ಪೀಡಿತೆ ತನ್ನ ಕಥೆಯನ್ನು ಎಲ್ಲರ ಮುಂದಿಟ್ಟಿದ್ದಾಳೆ. ಆಕೆ ಪತಿ ಓಮಾನ್ ನಾಗರಿಕನಂತೆ. ಆತ ವಾಟ್ಸಾಪ್   ಮೂಲಕ ತಲಾಕ್ ನೀಡಿದ್ದಾನಂತೆ. ಮೇ.2017 ರಂದು ಹೈದ್ರಾಬಾದ್ ನಲ್ಲಿ ಓಮಾನ್ ನಾಗರಿಕನ ಜೊತೆ ಮದುವೆಯಾಗಿತ್ತಂತೆ. ಒಂದು ವರ್ಷ ಓಮಾನ್ ನಲ್ಲಿದ್ದಳಂತೆ ಪೀಡಿತೆ. ನಂತ್ರ ಗರ್ಭಿಣಿ ಎಂಬ ಕಾರಣಕ್ಕೆ ಭಾರತಕ್ಕೆ ಬಂದಿದ್ದಳಂತೆ.

ಮಹಿಳೆ ಗಂಡು ಮಗುವಿಗೆ ಜನ್ಮ ನೀಡಿ ಓಮನ್ ಗೆ ವಾಪಸ್ ಆಗಿದ್ದಳಂತೆ. ಆದ್ರೆ ಅನಾರೋಗ್ಯದ ಕಾರಣ ಮಗು ಸಾವನ್ನಪ್ಪಿತ್ತಂತೆ. ಆಕೆ ಪತಿ ಚಿಕಿತ್ಸೆ ಹೆಸರಲ್ಲಿ ಮತ್ತೆ ಮಹಿಳೆಯನ್ನು ಭಾರತಕ್ಕೆ ಕಳುಹಿಸಿದ್ದನಂತೆ. ಈ ಮಧ್ಯೆ ವಾಟ್ಸಾಪ್ ನಲ್ಲಿ ತಲಾಕ್ ನೀಡಿದ್ದಾನೆ. ಯಾವುದೇ ಪ್ರಶ್ನೆಗೆ ಪತಿ ಉತ್ತರ ನೀಡ್ತಿಲ್ಲ. ನ್ಯಾಯ ಕೊಡಿಸಿ ಎಂದು ಮಹಿಳೆ ವಿದೇಶಾಂಗ ಸಚಿವರಿಗೆ ಮನವಿ ಸಲ್ಲಿಸಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...