alex Certify
ಕನ್ನಡ ದುನಿಯಾ       Mobile App
       

Kannada Duniya

ಒಂದೇ ಬಾರಿ ಹುಟ್ಟಿದ 3 ಮಕ್ಕಳು ಪಾಲಕರಿಗೆ ಬೇಡ್ವಂತೆ..?

ತಾಯಿಯೊಬ್ಬಳಿಗೆ ಮುದ್ದಾದ ಮೂರು ಮಕ್ಕಳು ಜನಿಸಿವೆ. ಒಂದೇ ಬಾರಿ ಈ ಪ್ರಪಂಚಕ್ಕೆ ಕಾಲಿಟ್ಟ ಮಕ್ಕಳಿಗೆ ತಾಯಿ ಅಪ್ಪುಗೆ, ಎದೆ ಹಾಲು ಮಾತ್ರ ಸಿಗ್ತಿಲ್ಲ. ನರ್ಸ್ ಮಕ್ಕಳಿಗೆ ಹಾಲು ಕುಡಿಸಿ,ಆರೈಕೆ ಮಾಡ್ತಿದ್ದಾರೆ.

ಇಷ್ಟಕ್ಕೂ ಈ ಮಕ್ಕಳಿಗೆ ತಾಯಿಯಿಲ್ಲವೆಂದಲ್ಲ. ಮಕ್ಕಳಿಗೆ ತಾಯಿ-ತಂದೆ ಇಬ್ಬರೂ ಇದ್ದಾರೆ. ಆದ್ರೆ ಒಂದೇ ಬಾರಿ ಜನಿಸಿದ ಮೂರು ಹೆಣ್ಣು ಮಕ್ಕಳ ಜವಾಬ್ದಾರಿ ತೆಗೆದುಕೊಳ್ಳಲು ಪಾಲಕರು ಸಿದ್ಧರಿಲ್ಲ. ಈಗಾಗಲೇ ದಂಪತಿಗೆ ಮೂರು ಹೆಣ್ಣು ಮಕ್ಕಳಿವೆ. ಮತ್ತೆ ಮೂರು ಹೆಣ್ಣು ಮಕ್ಕಳನ್ನು ಸಾಕುವಷ್ಟು ಆರ್ಥಿಕವಾಗಿಲ್ಲ ದಂಪತಿ.

ದಂಪತಿ ಮಕ್ಕಳನ್ನು ದತ್ತು ನೀಡಲು ನಿರ್ಧರಿಸಿದ್ದಾರೆ. ಹಾಗಾಗಿ ಮಕ್ಕಳಿಂದ ದೂರವಿದ್ದಾರೆ. ಹರ್ಯಾಣದ ರೋಹ್ಟಕ್ ನಲ್ಲಿ ಘಟನೆ ನಡೆದಿದೆ. ಫೆಬ್ರವರಿ 21ರಂದು ಮಕ್ಕಳು ಜನಿಸಿದ್ದು ಆರೋಗ್ಯವಾಗಿವೆ. ಗಂಡು ಮಗು ಬೇಕೆಂದು ದಂಪತಿ ಬಯಸಿದ್ದರಂತೆ. ಆದ್ರೆ ಮೂರು ಹೆಣ್ಣಾಗಿದ್ದು, ಎಲ್ಲ ಮಕ್ಕಳನ್ನೂ ದತ್ತು ನೀಡಲು ಮುಂದಾಗಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...