alex Certify
ಕನ್ನಡ ದುನಿಯಾ       Mobile App
       

Kannada Duniya

ಮದುವೆಯಾದ ನಾಲ್ಕು ತಿಂಗಳಿಗೇ ಮಗು ಹೆತ್ತ ಮಹಿಳೆ…!

ಮಧ್ಯಪ್ರದೇಶದ ಸೋಹಾಗ್ಪುರ ಗ್ರಾಮವೊಂದರಲ್ಲಿ ವಿಚಿತ್ರ ಘಟನೆ ಬೆಳಕಿಗೆ ಬಂದಿದೆ. ಮದುವೆಯಾದ ನಾಲ್ಕು ತಿಂಗಳಲ್ಲಿಯೇ ಮಹಿಳೆ ಮಗುವಿಗೆ ಜನ್ಮ ನೀಡಿದ್ದಾಳೆ. ಈ ಬಗ್ಗೆ ಪತ್ನಿಗೆ ಪ್ರಶ್ನೆ ಮಾಡಿದ ಪತಿ ಮಹತ್ವದ ಹೆಜ್ಜೆಯಿಟ್ಟಿದ್ದಾನೆ.

ನಾಲ್ಕು ತಿಂಗಳಲ್ಲೇ ಪತ್ನಿಗೆ ಹೆರಿಗೆಯಾಗಲು ಕಾರಣ ಆಕೆ ಮೇಲೆ ನಡೆದ ಅತ್ಯಾಚಾರವೆಂಬುದು ಪತಿಗೆ ತಿಳಿದಿದೆ. ಪತ್ನಿ ಮೇಲಾದ ದೌರ್ಜನ್ಯದ ವಿರುದ್ಧ ಹೋರಾಟ ನಡೆಸಲು ಪತಿ ಮುಂದಾಗಿದ್ದಾನೆ. ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ.

ಮಹಿಳೆ ಮನೆ ಪಕ್ಕದಲ್ಲಿ ಅಂಗಡಿ ಇಟ್ಟುಕೊಂಡಿದ್ದ ರಾಹುಲ್ ಎಂಬಾತ ಈ ಕೃತ್ಯವೆಸಗಿದ್ದಾನೆ. ಆತನ ವಿರುದ್ಧ ಮಹಿಳೆ ದೂರು ನೀಡಿದ್ದಾಳೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿ ಡಿಎನ್ಎ ಪರೀಕ್ಷೆ ಮಾಡಿಸಿದ್ದಾರೆ. ಆರೋಪಿಯನ್ನು ಕೋರ್ಟ್ ಮುಂದೆ ನಿಲ್ಲಿಸಿ ಜೈಲಿಗಟ್ಟಲಾಗಿದೆ. ಈ ಮಧ್ಯೆ ಪತ್ನಿ ಮೇಲೆ ದೌರ್ಜನ್ಯ ತಿಳಿದಿದ್ದರೂ ಪತ್ನಿಯನ್ನು ತನ್ನ ಜೊತೆಗಿಟ್ಟುಕೊಳ್ಳುವ ಮಹತ್ವದ ನಿರ್ಣಯ ಕೈಗೊಂಡಿದ್ದಾನೆ ಪತಿ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...