alex Certify
ಕನ್ನಡ ದುನಿಯಾ       Mobile App
       

Kannada Duniya

11ನೇ ಮಗುವಿಗೆ ಜನ್ಮ ನೀಡಿದ್ಲು 2 ಮೊಮ್ಮಕ್ಕಳ ಅಜ್ಜಿ

ರಾಜಸ್ತಾನದ ಸಾದುಲಶಹರ್ ನ ಹಳ್ಳಿಯೊಂದರಲ್ಲಿ ಮಹಿಳೆಯೊಬ್ಬಳು 11ನೇ ಮಗುವಿಗೆ ಜನ್ಮ ನೀಡಿದ್ದಾಳೆ. ಗುರುವಾರ ಮನ್ನಿದೇವಿಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಆಕೆಯನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ವೇಳೆ ಮಹಿಳೆ ತನ್ನ 11ನೇ ಮಗುವಿಗೆ ಜನ್ಮ ನೀಡಿದ್ದಾಳೆ.

ಮನ್ನಿದೇವಿ ಮದುವೆ 1991ರಲ್ಲಿ ನಡೆದಿತ್ತು. ಮದುವೆಯಾಗಿ ಎರಡು ವರ್ಷಕ್ಕೆ ದಂಪತಿ ಹೆಣ್ಣು ಮಗುವಿನ ಪಾಲಕರಾಗಿದ್ದರು. ನಂತ್ರ ಮತ್ತೊಂದು ಹೆಣ್ಣು ಮಗು ಜನಿಸಿತ್ತು. ಗಂಡು ಮಗು ಬೇಕು ಎನ್ನುವ ಕಾರಣಕ್ಕೆ ದಂಪತಿ ಬಾಬಾಗಳ ಹಿಂದೆ ಸುತ್ತಲು ಶುರುಮಾಡಿದ್ದರು. ಎಷ್ಟೇ ಪೂಜೆ ಮಾಡಿದ್ರೂ ಗಂಡು ಮಗು ಜನಿಸಿರಲಿಲ್ಲ. ಕೊನೆಗೂ 11ನೇ ಮಗು ಗಂಡಾಗಿದೆ.

ದಂಪತಿಯ ಹಿರಿಯ ಹಾಗೂ ಎರಡನೇ ಹೆಣ್ಣು ಮಕ್ಕಳ ಮದುವೆಯಾಗಿದೆ. ಇಷ್ಟೇ ಅಲ್ಲ ಮನ್ನಿದೇವಿಗೆ ಎರಡು ಮೊಮ್ಮಕ್ಕಳಿದ್ದಾರೆ. ಮನ್ನಿದೇವಿ ಉಳಿದ ಹೆಣ್ಣು ಮಕ್ಕಳು ಓದುತ್ತಿದ್ದಾರೆ. ಗಂಡು ಮಕ್ಕಳ ಬಯಕೆಗಾಗಿ ಬಾಬಾಗಳ ಹಿಂದೆ ಸುತ್ತಿ ಸಾಕಷ್ಟು ಖರ್ಚು ಮಾಡಿದ್ದೇವೆಂದು ಮನ್ನಿದೇವಿ ಪತಿ ರಾಮಪ್ರತಾಪ್ ಹೇಳಿದ್ದಾನೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...