alex Certify
ಕನ್ನಡ ದುನಿಯಾ       Mobile App
       

Kannada Duniya

ಹನಿಮೂನ್ ನಲ್ಲಿ ಪತ್ನಿಗೆ ಗೊತ್ತಾಯ್ತು ಪತಿಯ ಸತ್ಯ.!

woman_1498026958_749x421

ನೋಯ್ಡಾದ ಮಹಿಳೆಯೊಬ್ಬಳು ತನ್ನ ಗಂಡ ನಪುಂಸಕ ಎಂದು ಆರೋಪಿಸಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ. ಗಂಡ ಹಾಗೂ ಗಂಡನ ಮನೆಯವರು ಮೋಸ ಮಾಡಿದ್ದಾರೆಂದು ಮಹಿಳೆ ಆರೋಪಿಸಿದ್ದಾಳೆ. ಪತಿಗೆ ವಿಚ್ಛೇದನ ನೀಡಲು ಮುಂದಾಗಿರುವ ಮಹಿಳೆ ಮದುವೆಗೆ ಮಾಡಿದ್ದ ಖರ್ಚನ್ನು ನೀಡುವಂತೆ ಬೇಡಿಕೆ ಇಟ್ಟಿದ್ದಾಳೆ.

ಮೂಲಗಳ ಪ್ರಕಾರ ನವೆಂಬರ್ 2015ರಲ್ಲಿ ನೋಯ್ಡಾದ ಸೆಕ್ಟರ್ 12ರಲ್ಲಿ ವಾಸವಾಗಿರುವ ಮಹಿಳೆ ಸೆಕ್ಟರ್ 51ರ ನಿವಾಸಿ ಜೊತೆ ಮದುವೆಯಾಗಿದ್ದಳು. ಮದುವೆ ನಂತ್ರ ಹನಿಮೂನ್ ಗೆ ಇಬ್ಬರೂ ಗೋವಾಕ್ಕೆ ಹೋಗಿದ್ದಾರೆ. ಗೋವಾದಲ್ಲಿ ಪತಿ ಶಾರೀರಿಕ ಸಂಬಂಧ ಬೆಳೆಸಲು ನಿರಾಕರಿಸಿದ್ದಾನೆ. ಆಗ ಪತ್ನಿಗೆ ಸಂಶಯ ಬಂದಿದೆ.

ಮನೆಗೆ ಬಂದ ನಂತ್ರವೂ ಪತಿ, ಪತ್ನಿಯಿಂದ ದೂರವುಳಿದಿದ್ದಾನೆ. ಕೆಲಸಕ್ಕೆ ಸೇರಿದ ಪತಿ ನೈಟ್ ಶಿಫ್ಟ್ ನಲ್ಲಿ ವರ್ಕ್ ಮಾಡಲು ಶುರುಮಾಡಿದ್ದಾನೆ. ಮನೆಗೆ ಬಂದ ತಕ್ಷಣ ಪತ್ನಿ ಜೊತೆ ಮಾತನಾಡದೆ ಮಲಗುತ್ತಿದ್ದನಂತೆ. ಇದ್ರಿಂದ ಬೇಸರಗೊಂಡ ಮಹಿಳೆ ತನ್ನ ತವರಿಗೆ ಸುದ್ದಿ ತಿಳಿಸಿದ್ದಾಳೆ. ಎರಡೂ ಮನೆಯವರ ನಡುವೆ ಒಂದು ಸುತ್ತಿನ ಮಾತುಕತೆ ನಡೆದಿದೆ. ವೈದ್ಯರಿಂದ ಚಿಕಿತ್ಸೆ ಪಡೆಯುವಂತೆ ಹೇಳಲಾಗಿದೆ. ಆದ್ರೆ ಪತಿ ಮಾತ್ರ ವೈದ್ಯರ ಬಳಿ ಹೋಗಲಿಲ್ಲ. ಇದ್ರಿಂದ ನೊಂದ ಮಹಿಳೆ ತವರಿಗೆ ಬಂದು ವಾಸ ಮಾಡಲು ಶುರುಮಾಡಿದ್ದಾಳೆ.

ಈಗ ಪೊಲೀಸ್ ಠಾಣೆಯಲ್ಲಿ ಪತಿ ವಿರುದ್ಧ ದೂರು ನೀಡಿದ್ದಾಳೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮಾತುಕತೆ ನಡೆಸಲಿದ್ದಾರೆ. ಪತಿ ವೈದ್ಯರ ಬಳಿ ಚಿಕಿತ್ಸೆ ಪಡೆಯಲು ಒಪ್ಪದೆ ಹೋದಲ್ಲಿ ವಿಚ್ಛೇದನಕ್ಕೆ ಪತ್ನಿ ಅರ್ಜಿ ಸಲ್ಲಿಸಲಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...