alex Certify
ಕನ್ನಡ ದುನಿಯಾ       Mobile App
       

Kannada Duniya

ಟ್ರಯಲ್ ರೂಮಿನ ಕಿಂಡಿಯಲ್ಲಿ ಇಣುಕುತ್ತಿದ್ದವನು ಪರಾರಿ

SALESMAN-MOBILE-TRIAL-ROOMಉಡುಪು ಖರೀದಿಸಲು ಮಾಲ್ ಒಂದಕ್ಕೆ ತೆರಳಿದ್ದ ಯುವತಿಯೊಬ್ಬಳು ಟ್ರಯಲ್ ರೂಮಿಗೆ ತೆರಳಿ ಉಡುಪು ಬದಲಾಯಿಸುತ್ತಿರುವ ವೇಳೆ ಮಾಲ್ ಸಿಬ್ಬಂದಿಯೊಬ್ಬ ಟ್ರಯಲ್ ರೂಮಿನ ಕಿಂಡಿಯಲ್ಲಿ ಇಣುಕಿ ನೋಡುತ್ತಿದ್ದುದ್ದಲ್ಲದೇ ತನ್ನ ಮೊಬೈಲ್ ನಲ್ಲಿ ಫೋಟೋ ತೆಗೆಯಲು ಯತ್ನಿಸಿದ ಘಟನೆ ಕೋಲ್ಕತ್ತಾದಲ್ಲಿ ನಡೆದಿದೆ.

ತನ್ನ ಸ್ನೇಹಿತೆಯೊಂದಿಗೆ ದಕ್ಷಿಣ ಕೋಲ್ಕತ್ತಾದಲ್ಲಿರುವ ಸರ್ವೇ ಪಾರ್ಕ್ ಏರಿಯಾದ ಮಾಲ್ ಗೆ ಯುವತಿ ತೆರಳಿದ್ದಳು. ಕೆಲವೊಂದು ಉಡುಪುಗಳನ್ನು ಆಯ್ಕೆ ಮಾಡಿಕೊಂಡ ಬಳಿಕ ಅದನ್ನು ಧರಿಸಿ ನೋಡಲು ಟ್ರಯಲ್ ರೂಮಿಗೆ ತೆರಳಿದ್ದಾರೆ.

ಈ ಸಂದರ್ಭದಲ್ಲಿ ಕಿಂಡಿ ಮೂಲಕ ಯಾರೋ ಇಣುಕಿ ನೋಡುತ್ತಿರುವುದು ಆಕೆಯ ಗಮನಕ್ಕೆ ಬಂದಿದ್ದು, ಕೂಡಲೇ ಹೊರಗಿದ್ದ ಸ್ನೇಹಿತೆಗೆ ಕೂಗಿ ಹೇಳಿದ್ದಾಳೆ. ಯುವತಿಯ ಸ್ನೇಹಿತೆ ಓಡಿ ಬಂದು ಆತನನ್ನು ಹಿಡಿದುಕೊಂಡಿದ್ದು, ಆದರೆ ಕೈಕೊಸರಿಕೊಂಡು ಆತ ಪರಾರಿಯಾಗಿದ್ದಾನೆ. ತನ್ನ ಮೊಬೈಲನ್ನು ಸ್ಥಳದಲ್ಲಿಯೇ ಬಿಟ್ಟು ಹೋಗಿದ್ದು, ಯುವತಿಯ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆತನ ಪತ್ತೆ ಕಾರ್ಯದಲ್ಲಿ ತೊಡಗಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...