alex Certify
ಕನ್ನಡ ದುನಿಯಾ       Mobile App
       

Kannada Duniya

ಮೈಮೇಲೆ ರೈಲು ಹರಿದರೂ ಬಚಾವಾದ್ಲು ಮಹಿಳೆ

rail

ಭಾರತದಲ್ಲಿ ರೈಲು ಅಪಘಾತಗಳು ದಿನೇ ದಿನೇ ಹೆಚ್ಚಾಗುತ್ತಲೇ ಇವೆ. ಪ್ರಯಾಣಿಕರು ರೈಲಿನಿಂದ ಆಯತಪ್ಪಿ ಬಿದ್ದಿರುವ, ಮೈಮೇಲೆ ರೈಲು ಹಾದು ಹೋಗಿರುವ ಎಷ್ಟೋ ಘಟನೆಗಳು ನಡೆದಿವೆ. ಹಳಿದಾಟುವ ಸಂದರ್ಭದಲ್ಲಿ ನಡೆಯುವ ಅಪಘಾತಗಳಿಗಂತೂ ಲೆಕ್ಕವೇ ಇಲ್ಲ.

ಆದ್ರೆ ಚಮತ್ಕಾರದ ರೀತಿಯಲ್ಲಿ ರೈಲು ಮೈಮೇಲೆ ಹರಿದು ಹೋದ್ರೂ ಮಹಿಳೆಯೊಬ್ಬಳು ಬದುಕುಳಿದಿದ್ದಾಳೆ. ಈ ವಿಡಿಯೋ ವೈರಲ್ ಆಗಿದೆ. ಗೂಡ್ಸ್ ರೈಲೊಂದು ಶರವೇಗದಲ್ಲಿ ಬರ್ತಾ ಇತ್ತು. ಹಳಿ ದಾಟಲು ಯತ್ನಿಸ್ತಾ ಇದ್ದ ಮಹಿಳೆಯೊಬ್ಳು ಆಯತಪ್ಪಿ ಬಿದ್ದುಬಿಟ್ಟಿದ್ಲು.

ಎದ್ದು ಓಡಿ ಹೋಗುವಷ್ಟು ಸಮಯವಿರಲಿಲ್ಲ, ಹಾಗೇ ಹಳಿಗಳ ಮೇಲೆ ಮಲಗಿಬಿಟ್ಟಿದ್ದಾಳೆ. ರೈಲು ವೇಗವಾಗಿ ಅವಳ ಮೈಮೇಲೆ ಹಾದು ಹೋಗಿದೆ. ಅದೃಷ್ಟವಶಾತ್ ಮಹಿಳೆಗೆ ಏನೂ ಆಗಿಲ್ಲ. ರೈಲು ಹೊರಟು ಹೋದ ಮೇಲೆ ಆಕೆ ನಿಧಾನವಾಗಿ ಹಳಿ ಮೇಲಿಂದ ಎದ್ದು ಬಂದ್ಲು. ಸುತ್ತ ನಿಂತಿದ್ದ ಜನರಿಗೆಲ್ಲ ಅಚ್ಚರಿ. ನಿಜಕ್ಕೂ ಇದು ಚಮತ್ಕಾರ ಅಂತಾನೇ ಎಲ್ಲರೂ ಮಾತನಾಡಿಕೊಳ್ತಿದ್ರು. ಆದ್ರೆ ಈ ಘಟನೆ ನಡೆದಿದ್ದೆಲ್ಲಿ ಅನ್ನೋದು ಮಾತ್ರ ತಿಳಿದು ಬಂದಿಲ್ಲ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...