alex Certify
ಕನ್ನಡ ದುನಿಯಾ       Mobile App
       

Kannada Duniya

ಮುಂಬೈ ಲೋಕಲ್ ಟ್ರೈನ್ ನಲ್ಲಿ ನಡೆದಿದೆ ಶಾಕಿಂಗ್ ಘಟನೆ

ಮುಂಬೈನ ಲೋಕಲ್ ಟ್ರೈನ್ ನಲ್ಲಿ ಪ್ರಯಾಣಿಸ್ತಾ ಇದ್ದ ಯುವತಿಯೊಬ್ಬಳಿಂದ ಮೊಬೈಲ್ ಕಿತ್ತುಕೊಳ್ಳಲು ಕಳ್ಳನೊಬ್ಬ ಆಕೆಯ ಕೈಗಳ ಮೇಲೆ ಹೊಡೆದಿದ್ದರಿಂದ ಅವಳು ರೈಲಿನಿಂದ ಆಯತಪ್ಪಿ ಬಿದ್ದು ಗಾಯಗೊಂಡಿದ್ದಾಳೆ.

ರೈಲಿನ ಫುಟ್ ಬೋರ್ಡ್ ಮೇಲೆ ಯುವತಿ ನಿಂತಿದ್ದಳು. ಮೊಬೈಲ್ ಕದ್ದಿದ್ದ ಅಪ್ರಾಪ್ತ ಮತ್ತು ಅದನ್ನು ಖರೀದಿ ಮಾಡಿದ್ದ ಮಹಿಳೆ ರುಕ್ಸಾನಾಳನ್ನು ಪೊಲೀಸರು ಬಂಧಿಸಿದ್ದಾರೆ. ಛತ್ರಪತಿ ಶಿವಾಜಿ ಟರ್ಮಿನಸ್ ನಲ್ಲಿ ದ್ರವಿತಾ ಸಿಂಗ್ ಎಂಬ ಯುವತಿ ಮಹಿಳೆಯರ ವಿಶೇಷ ರೈಲು ಏರಿ ಕಚೇರಿಗೆ ಹೊರಟಿದ್ಲು.

ಸ್ವಲ್ಪ ದೂರ ಬರುತ್ತಿದ್ದಂತೆ ಆಕೆಗೆ ಫೋನ್ ಕಾಲ್ ಬಂದಿತ್ತು. ನೆಟ್ವರ್ಕ್ ಸಮಸ್ಯೆ ಇದ್ದಿದ್ರಿಂದ ರೈಲಿನ ಫುಟ್ ಬೋರ್ಡ್ ಮೇಲೆ ನಿಂತು ಮಾತನಾಡುತ್ತಿದ್ಲು. ರೈಲು ಮಸ್ಜಿದ್ ಬಂದರ್ ಬಳಿ ಬರುತ್ತಿದ್ದಂತೆ ಅಪ್ರಾಪ್ತನೊಬ್ಬ ಕಂಬ ಏರಿ ದ್ರವಿತಾ ಕೈಯಲ್ಲಿದ್ದ ಫೋನ್ ಕಸಿಯಲು ಯತ್ನಿಸಿದ್ದಾನೆ.

ಆಗ ದ್ರವಿತಾ ಆಯತಪ್ಪಿ ರೈಲಿನಿಂದ ಕೆಳಕ್ಕೆ ಹಳಿಗಳ ಮೇಲೆ ಬಿದ್ದಿದ್ದಾಳೆ. ಹಳಿ ಮೇಲಿಂದ ಉರುಳಿಕೊಂಡು ಹೋಗಿ ಪ್ರಾಣ ಉಳಿಸಿಕೊಂಡಿದ್ದಾಳೆ. ಇಲ್ಲದೇ ಹೋದಲ್ಲಿ ಕುರ್ಲಾ ಕಡೆಗೆ ಹೊರಟಿದ್ದ ರೈಲು ಅವಳ ತಲೆಯ ಮೇಲೆ ಹರಿದುಬಿಡುತ್ತಿತ್ತು. ಆಕೆಯ ಬಲಗಾಲಿಗೆ ಪೆಟ್ಟಾಗಿದೆ, ಎಡಗೈ ಬೆರಳುಗಳು ತುಂಡಾಗಿವೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...