alex Certify
ಕನ್ನಡ ದುನಿಯಾ       Mobile App
       

Kannada Duniya

ಬೆಚ್ಚಿ ಬೀಳಿಸುವಂತಿದೆ ಆಕೆ ಹೇಳಿದ ಹಾವಿನ ರಹಸ್ಯ

crimescene koyam

ಕೊಯಂಬತ್ತೂರು: ಅನೈತಿಕ ಸಂಬಂಧದಿಂದ ಏನೆಲ್ಲಾ ಅವಾಂತರಗಳಾಗಿವೆ ಎಂಬುದನ್ನು ಬಹುತೇಕ ಪ್ರಕರಣಗಳಲ್ಲಿ ನೋಡಿರುತ್ತೀರಿ. ಹೀಗೆ ವ್ಯಕ್ತಿಯೊಬ್ಬನ ಜೊತೆಗೆ ಅಕ್ರಮ ಸಂಬಂಧ ಹೊಂದಿದ್ದ ಮಹಿಳೆ, ಗಂಡನನ್ನೇ ಕೊಲೆ ಮಾಡಿದ ಘಟನೆ ನಡೆದಿದೆ.

ಶಾರದಾ ಗಂಡನನ್ನೇ ಕೊಲೆ ಮಾಡಿದ ಮಹಿಳೆ. ಈಕೆ ಪ್ರಿಯಕರ ರಾಮ್ ಮತ್ತು ಆತನ ಸಹಚರ ಕೃಷ್ಣ ಜೊತೆ ಸೇರಿ ತನ್ನ ಪತಿ ಶಕ್ತಿವೇಲ್ ನನ್ನು ಕೊಲೆ ಮಾಡಿದ್ದಾಳೆ. ರಾಮ್ ಜೊತೆಗೆ ಅಕ್ರಮ ಸಂಬಂಧ ಹೊಂದಿದ್ದ ಶಾರದಾ, ಗಂಡನನ್ನು ಸಾಯಿಸಲು ಆತನ ರೂಮ್ ನಲ್ಲಿ ಕಾಳಿಂಗ ಸರ್ಪವನ್ನು ಬಿಟ್ಟು ಗಂಟೆಗಟ್ಟಲೆ ಕಾದಿದ್ದಾಳೆ. ಆದರೆ, ಹಾವು ಆತನಿಗೆ ಕಚ್ಚದೇ ಬಚಾವ್ ಆಗಿದ್ದಾನೆ. ನಂತರ ಪ್ರಿಯಕರ ಮತ್ತು ಆತನ ಸಹಚರನೊಂದಿಗೆ ಸೇರಿ, ಗಂಡನನ್ನು ಕೊಲೆ ಮಾಡಿದ್ದಾಳೆ.

ಶವವನ್ನು ಮನೆಯ ನೀರಿನ ತೊಟ್ಟಿಯಲ್ಲಿ ಹಾಕಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡ ಪೊಲೀಸರು, ತನಿಖೆ ನಡೆಸಿದ್ದು, ಶಾರದಾಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಕೊಲೆ ರಹಸ್ಯ ಬಯಲಾಗಿದೆ ಎಂದು ಹೇಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...