alex Certify
ಕನ್ನಡ ದುನಿಯಾ       Mobile App
       

Kannada Duniya

ನವ ವಿವಾಹಿತೆ ಮಾಡಿದ್ದಾಳೆ ನಾಚಿಕೆಗೇಡಿನ ಕೆಲಸ

ಈ ಪ್ರಕರಣ ಸೋನಂ ಕಪೂರ್ ಅಭಿನಯದ ಬಾಲಿವುಡ್ ಚಿತ್ರ ‘ಡಾಲಿ ಕೀ ಡೋಲಿ’ ಯನ್ನು ಹೋಲುತ್ತದೆ. ಹೊಸ ಬದುಕಿನ ಹೊಂಗನಸು ಕಟ್ಟಿಕೊಂಡು ವೈವಾಹಿಕ ಜೀವನಕ್ಕೆ ಕಾಲಿಟ್ಟ ನವ ವಿವಾಹಿತನೊಬ್ಬ ಕೇವಲ ಎರಡೇ ದಿನಕ್ಕೆ ತನ್ನ ಪತ್ನಿ ಮಾಡಿದ ಕೆಲಸಕ್ಕೆ ಕಂಗಾಲಾಗಿ ಕುಳಿತಿದ್ದಾನೆ.

ಇಂತದೊಂದು ಘಟನೆ ಉತ್ತರಾಕಾಂಡ್ ನಲ್ಲಿ ನಡೆದಿದೆ. ಉತ್ತರ ಪ್ರದೇಶ-ಉತ್ತರಾಕಾಂಡ್ ಗಡಿ ಭಾಗದ ನಿವಾಸಿ ಅಜಯ್ ತ್ಯಾಗಿ, ನವೆಂಬರ್ 22 ರಂದು ವೈವಾಹಿಕ ಬದುಕಿಗೆ ಕಾಲಿಟ್ಟಿದ್ದ. ಮಹಿಳೆಯೊಬ್ಬಳು ಈ ಸಂಬಂಧವನ್ನು ಕುದುರಿಸಿದ್ದು, ತನ್ನ ಗ್ರಾಮದ ಜನರ ಸಮ್ಮುಖದಲ್ಲೇ ಅಜಯ್ ತ್ಯಾಗಿಯ ವಿವಾಹ ಕಾಯಾ ಎಂಬಾಕೆಯ ಜೊತೆ ನೆರವೇರಿತ್ತು.

ವಿವಾಹವಾದ ಎರಡು ದಿನಗಳ ಬಳಿಕ ನವ ವಿವಾಹಿತೆ ಕಾಯಾ ಆನಾರೋಗ್ಯದ ನೆಪ ಹೇಳಿದ್ದಾಳೆ. ಕೂಡಲೇ ಆಕೆಯನ್ನು ಸಮೀಪದ ವೈದ್ಯರ ಬಳಿ ಕರೆದೊಯ್ದಿದ್ದು, ಅವರು ಚಿಕಿತ್ಸೆ ನೀಡಿದ್ದಾರೆ. ಮನೆಗೆ ಮರಳುವ ವೇಳೆ ಕಾಯಾ, ಐಸ್ ಕ್ರೀಂ ತಿನ್ನುವ ಬಯಕೆ ವ್ಯಕ್ತಪಡಿಸಿದ್ದು, ತರಲು ಹೋದ ವೇಳೆ ನಾಪತ್ತೆಯಾಗಿದ್ದಾಳೆ.

ಗಂಟೆಗಟ್ಟಲೆ ಆಕೆಗಾಗಿ ಕಾದ ಅಜಯ್ ತ್ಯಾಗಿ ಮತ್ತಾತನ ಸಹೋದರ ಮನೆಗೆ ಮರಳಿದಾಗ ವಿವಾಹ ಸಂದರ್ಭದಲ್ಲಿ ಕಾಯಾಳಿಗೆ ನೀಡಿದ್ದ ಚಿನ್ನದ ಆಭರಣಗಳು ನಾಪತ್ತೆಯಾಗಿರುವುದನ್ನು ಗಮನಿಸಿದ್ದಾರೆ. ವಿವಾಹ ಕುದುರಿಸಿದ್ದಾಕೆಯ ಬಳಿ ಕಾಯಾಳ ವಿಳಾಸ ವಿಚಾರಿಸಿಕೊಂಡು ಹೋದವರಿಗೆ ಅಲ್ಲಿಯೂ ಆಘಾತವಾಗಿದ್ದು, ಆಕೆಯೂ ನಾಪತ್ತೆಯಾಗಿರುವುದು ಕಂಡು ಬಂದಿದೆ.

ಇದೀಗ ಅತ್ತ ಹೆಂಡತಿಯೂ ಇಲ್ಲದೆ ಇತ್ತ ತಾನು ಕೂಡಿಟ್ಟ ಆಭರಣಗಳೂ ಕಾಣದೆ ಕಂಗೆಟ್ಟ ಅಜಯ್ ತ್ಯಾಗಿ, ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾನೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ವಿವಾಹದ ಹೆಸರಿನಲ್ಲಿ ವಂಚಿಸುತ್ತಿರುವ ತಂಡವೊಂದು ಸಕ್ರಿಯವಾಗಿದ್ದು, ಇದು ಅದೇ ತಂಡದ ಕೃತ್ಯವಿರಬಹುದೆಂದು ಶಂಕಿಸಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...