alex Certify
ಕನ್ನಡ ದುನಿಯಾ       Mobile App
       

Kannada Duniya

ಸಾವಿಗೆ ಕಾರಣವಾಯ್ತು ಫಿಟ್ನೆಸ್ ಗಾಗಿ ಕುಡಿಯುತ್ತಿದ್ದ ಸೋರೆಕಾಯಿ ಜ್ಯೂಸ್

ಇತ್ತೀಚಿನ ದಿನಗಳಲ್ಲಿ ಹೆಲ್ತ್ ಹಾಗೂ ಫಿಟ್ನೆಸ್ ಗೆ ಜನರು ಹೆಚ್ಚಿನ ಮಹತ್ವ ನೀಡ್ತಿದ್ದಾರೆ. ಫಿಟ್ ಆಗಿರಲು ಏನು ಮಾಡಲು ಕೆಲ ಜನರು ಸಿದ್ಧರಿರ್ತಾರೆ. ಕೆಲವರು ತಜ್ಞರ ಸಲಹೆ ಪಡೆದ್ರೆ ಮತ್ತೆ ಕೆಲವರು ಮನೆ ಮದ್ದಿನ ಮೊರೆ ಹೋಗ್ತಾರೆ. ಮಹಾರಾಷ್ಟ್ರದಲ್ಲಿ ಫಿಟ್ನೆಸ್ ಹುಚ್ಚಿಗೆ ಬಿದ್ದು ಮಹಿಳೆ ಸಾವನ್ನಪ್ಪಿದ್ದಾಳೆ. ಫಿಟ್ನೆಸ್ ಗಾಗಿ ಸೋರೆಕಾಯಿ ಜ್ಯೂಸ್ ಕುಡಿದು 41 ವರ್ಷದ ಮಹಿಳೆ ಪ್ರಾಣ ಕಳೆದುಕೊಂಡಿದ್ದಾಳೆ.

ಪುಣೆಯ ಬಾನೆರಾ ಪ್ರದೇಶದಲ್ಲಿ ವಾಸವಾಗಿದ್ದ ಗೌರಿ ಷಾ ಬೆಳಗಿನ ವಾಕ್ ನಂತ್ರ ಸೋರೆಕಾಯಿ ಜ್ಯೂಸ್ ಕುಡಿದಿದ್ದಾಳೆ. ಜ್ಯೂಸ್ ಕುಡಿಯುತ್ತಿದ್ದಂತೆ ಹೊಟ್ಟೆ ನೋವು ಕಾಣಿಸಿಕೊಂಡಿದೆ. ನಂತ್ರ ವಾಂತಿ ಶುರುವಾಗಿದೆ. ಜೂನ್ 12 ರಂದೇ ಮಹಿಳೆ ಆಸ್ಪತ್ರೆಗೆ ದಾಖಲಾಗಿದ್ದಳು. ಜೂನ್ 16 ರವರೆಗೆ ಚಿಕಿತ್ಸೆ ನಡೆದಿದೆ. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ಮಹಿಳೆ ಸಾವನ್ನಪ್ಪಿದ್ದಾಳೆ.

ಮಹಿಳೆ ಕಹಿ ಸೋರೆಕಾಯಿ ಜ್ಯೂಸ್ ಕುಡಿದಿದ್ದಾಳೆ. ಕಹಿ ಸೋರೆಕಾಯಿ ಆರೋಗ್ಯಕ್ಕೆ ಹಾನಿಕರ. ಇದ್ರಿಂದಾಗಿ ಆಕೆ ಪ್ರಾಣ ಹೋಗಿದೆ ಎಂದು ವೈದ್ಯರು ಹೇಳಿದ್ದಾರೆ. ಮಹಿಳೆ ಸೋರೆಕಾಯಿ ಜೊತೆ ಕ್ಯಾರೆಟ್ ಜ್ಯೂಸ್ ಮಿಕ್ಸ್ ಮಾಡಿ ಕುಡಿದಿದ್ದಳಂತೆ. ಹಾಗಾಗಿ ಆಕೆಗೆ ಕಹಿ ಗೊತ್ತಾಗಲಿಲ್ಲ. ವಿಷ ಇಡೀ ದೇಹವನ್ನು ಆವರಿಸಿತ್ತು ಎಂದು ವೈದ್ಯರು ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...