alex Certify
ಕನ್ನಡ ದುನಿಯಾ       Mobile App
       

Kannada Duniya

ಮಹಿಳೆ ಸಾವಿಗೆ ಕಾರಣವಾಯ್ತು ಬೆಕ್ಕು

cat

ಮಹಾರಾಷ್ಟ್ರದ ಪುಣೆಯಲ್ಲಿ ಬೆಕ್ಕಿನ ಕಾರಣಕ್ಕೆ ಮಹಿಳೆಯೊಬ್ಬಳು ಜೀವ ಕಳೆದುಕೊಂಡಿದ್ದಾಳೆ. ಪುಣೆಯ ಪಿಂಪ್ರಿ ಚಿಂಚ್ವಾಡ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ.

ಪ್ರಭಾ ಹೆಸರಿನ ಮಹಿಳೆ ತನ್ನ ಮನೆಯಲ್ಲಿ ಬಿಳಿ-ಕಪ್ಪು ಬಣ್ಣದ ಬೆಕ್ಕೊಂದನ್ನು ಸಾಕಿದ್ದಳು. ಬೆಕ್ಕನ್ನು ತನ್ನ ಮಗುವಿನಂತೆ ಸಾಕಿದ್ದಳು ಪ್ರಭಾ. ಸೋಮವಾರ ಬೆಳಿಗ್ಗೆ ಬೆಕ್ಕು ಪ್ರಭಾ ಪಕ್ಕದ ಮನೆಯ ರಾಜೀವ್ ಸಾಳ್ವಿ ಎಂಬುವವರ ಮನೆಗೆ ಹೋಗಿದೆ. ಇದ್ರಿಂದ ಕೋಪಗೊಂದ ರಾಜೀವ್ ಮೊದಲು ಬೆಕ್ಕಿಗೆ ಹೊಡೆದಿದ್ದಾನೆ. ನಂತ್ರ ಮನೆಯಿಂದ ಹೊರಗೆ ಬಿಸಾಡಿದ್ದಾನೆ.

ಬೆಕ್ಕಿಗೆ ಗಾಯವಾಗಿದ್ದನ್ನು ನೋಡಿದ ಪ್ರಭಾ ಕೋಪಗೊಂಡಿದ್ದಾಳೆ. ರಾಜೀವ್ ಜೊತೆ ಜಗಳಕ್ಕಿಳಿದಿದ್ದಾಳೆ. ಇಬ್ಬರ ಜಗಳ ಕೈ ಕೈ ಮಿಲಾಯಿಸುವವರೆಗೆ ಹೋಗಿದೆ. ಈ ಗಲಾಟೆಯಲ್ಲಿ ಪ್ರಭಾಗೆ ಹೃದಯಾಘಾತವಾಗಿದೆ. ಅಲ್ಲೇ ಪ್ರಭಾ ಕೊನೆಯುಸಿರೆಳೆದಿದ್ದಾಳೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...