alex Certify
ಕನ್ನಡ ದುನಿಯಾ       Mobile App
       

Kannada Duniya

ಆಧಾರ್ ಕಾರ್ಡ್ ಕಾರಣಕ್ಕೆ ಕಾರ್ಗಿಲ್ ಯೋಧನ ಪತ್ನಿ ಸಾವು..?

ಸೋನಿಪತ್(ಹರಿಯಾಣ): ಆಧಾರ್ ಕಾರ್ಡ್ ತೋರಿಸದ ಕಾರಣಕ್ಕೆ ಸಕಾಲಕ್ಕೆ ಚಿಕಿತ್ಸೆ ಸಿಗದೇ ಕಾರ್ಗಿಲ್ ಹುತಾತ್ಮ ಯೋಧನ ಪತ್ನಿ ಸಾವನ್ನಪ್ಪಿದ್ದಾರೆ.

ಯೋಧ ಹವಾಲ್ದಾರ್ ಲಕ್ಷ್ಮಣ್ ದಾಸ್ ಅವರ ಪತ್ನಿ ಶಕುಂತಲಾ ದೇವಿ ಅವರು ಕಾಯಿಲೆಯಿಂದ ಬಳಲಿದ್ದು, ಸೋನಿಪತ್ ನ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆ ಪಡೆಯಲು ದಾಖಲಾಗಿದ್ದಾರೆ. ಆದರೆ, ಅವರು ಆಧಾರ್ ಕಾರ್ಡ್ ತೋರಿಸದ ಕಾರಣಕ್ಕೆ ವೈದ್ಯರು ಸಕಾಲಕ್ಕೆ ಚಿಕಿತ್ಸೆ ನೀಡಿಲ್ಲ. ಇದರಿಂದಾಗಿ ಶಕುಂತಲಾ ದೇವಿ ಮೃತಪಟ್ಟಿದ್ದಾರೆ.

ಶಕುಂತಲಾ ದೇವಿ ಅವರ ಪುತ್ರ ಪವನ್ ಕುಮಾರ್, ಈ ರೀತಿ ಆರೋಪ ಮಾಡಿದ್ದು, ತಾಯಿಯ ಆಧಾರ್ ಕಾರ್ಡ್ ನಕಲು ಪ್ರತಿಯನ್ನು ತೋರಿಸಿದರೂ, ವೈದ್ಯರು ಚಿಕಿತ್ಸೆ ನೀಡಿಲ್ಲ. ಆಸ್ಪತ್ರೆಗೆ ದಾಖಲಿಸಿಕೊಳ್ಳದೇ, ಚಿಕಿತ್ಸೆ ನೀಡದ ಕಾರಣ ತಾಯಿ ಮೃತಪಟ್ಟಿರುವುದಾಗಿ ಹೇಳಿದ್ದಾರೆ.

ಆದರೆ, ಆಸ್ಪತ್ರೆಯ ವೈದ್ಯರು ಈ ಆರೋಪವನ್ನು ನಿರಾಕರಿಸಿದ್ದಾರೆ. ನಿಯಮಾನುಸಾರ ಆಧಾರ್ ಕಾರ್ಡ್ ಮಾಹಿತಿ ಪಡೆಯುತ್ತೇವೆ. ಆದರೆ, ಶಕುಂತಲಾ ದೇವಿ ಅವರಿಗೆ ಕೂಡಲೇ ಚಿಕಿತ್ಸೆ ನೀಡಲಾಗಿದೆ. ಕುಟುಂಬದವರೇ ಅವರನ್ನು ಆಸ್ಪತ್ರೆಯಿಂದ ಕರೆದುಕೊಂಡು ಹೋಗಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...