alex Certify
ಕನ್ನಡ ದುನಿಯಾ       Mobile App
       

Kannada Duniya

ಬ್ಯಾಂಕ್ ಕ್ಯೂ ನಲ್ಲಿದ್ದಾಗಲೇ ಮಗು ಹೆತ್ತ ಮಹಿಳೆ

women-baby-deliveryಕಪ್ಪು ಹಣಕ್ಕೆ ಕಡಿವಾಣ ಹಾಕುವ ಸಲುವಾಗಿ ನವೆಂಬರ್ 8 ರಿಂದ 500 ಹಾಗೂ 1000 ರೂ. ಮುಖ ಬೆಲೆಯ ನೋಟು ಚಲಾವಣೆಯನ್ನು ರದ್ದುಗೊಳಿಸಲಾಗಿದ್ದು, ಅಗತ್ಯಕ್ಕೆ ಹಣ ಪಡೆಯಲು ಜನ ಪರದಾಡುತ್ತಿದ್ದಾರೆ.

ಬ್ಯಾಂಕ್ ಹಾಗೂ ಎಟಿಎಂ ಗಳ ಮುಂದೆ ಸರತಿ ಸಾಲಿನಲ್ಲಿ ನಿಂತಿರುವ ದೃಶ್ಯ ಸಾಮಾನ್ಯವಾಗಿದ್ದು, ಹೀಗೆ ಕ್ಯೂನಲ್ಲಿ ನಿಂತಿರುವಾಗಲೇ ಕೆಲವರು ಸಾವನ್ನಪ್ಪಿರುವ ಘಟನೆಗಳೂ ನಡೆದಿವೆ.

ಈ ಮಧ್ಯೆ ಹಣ ಪಡೆಯಲು ಬ್ಯಾಂಕ್ ನಲ್ಲಿ ಕ್ಯೂ ನಿಂತಿದ್ದ ಗರ್ಭಿಣಿ ಮಹಿಳೆಯೊಬ್ಬಳು ಮಗು ಹೆತ್ತ ಘಟನೆ ಉತ್ತರ ಪ್ರದೇಶದ ದೆಹತ್ ಜಿಲ್ಲೆಯಲ್ಲಿ ನಡೆದಿದೆ. ಸರ್ವೇಶಾ ಎಂಬ 30 ವರ್ಷದ ಮಹಿಳೆಯ ಪತಿ ಕಳೆದ ಸೆಪ್ಟೆಂಬರ್ ನಲ್ಲಿ ನಡೆದ ಅಪಘಾತದಲ್ಲಿ ಮೃತಪಟ್ಟಿದ್ದು, ಪರಿಹಾರವಾಗಿ ಬಂದ ಹಣ ಬ್ಯಾಂಕ್ ನಲ್ಲಿ ಜಮೆಯಾಗಿದ್ದ ಕಾರಣ ತನ್ನ ಅತ್ತೆಯೊಂದಿಗೆ ಹಣ ಡ್ರಾ ಮಾಡಲು ಬಂದಿದ್ದಾರೆ.

ಕ್ಯೂನಲ್ಲಿ ನಿಂತಿದ್ದ ವೇಳೆಯೇ ಸರ್ವೇಶಾಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಬ್ಯಾಂಕ್ ನಲ್ಲಿದ್ದ ಇತರೆ ಮಹಿಳೆಯರು ನೆರವಿಗೆ ಧಾವಿಸಿದ್ದಾರೆ. ಕೆಲ ಹೊತ್ತಿನಲ್ಲೇ ಮುದ್ದಾದ ಹೆಣ್ಣು ಮಗುವಿಗೆ ಸರ್ವೇಶಾ ಜನ್ಮ ನೀಡಿದ್ದಾರೆ. ಸಕಾಲಕ್ಕೆ ಅಂಬುಲೆನ್ಸ್ ಬಾರದ ಕಾರಣ ಪೊಲೀಸ್ ಜೀಪ್ ನಲ್ಲಿ ತಾಯಿ ಹಾಗೂ ಮಗುವನ್ನು ಆಸ್ಪತ್ರೆಗೆ ಸೇರಿಸಲಾಗಿದ್ದು, ಆರೋಗ್ಯವಾಗಿದ್ದಾರೆಂದು ಹೇಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...