alex Certify
ಕನ್ನಡ ದುನಿಯಾ       Mobile App
       

Kannada Duniya

ಕರುಣಾನಿಧಿ ಮೊಮ್ಮಗಳಂತೆ ಈ ಮಹಿಳೆ, ತಂದೆಯ ಭೇಟಿಗಾಗಿ ಕೋರ್ಟ್ ಗೆ ಮೊರೆ

ಚೆನ್ನೈನಲ್ಲಿ ಮಹಿಳೆಯೊಬ್ಬಳು ತಾನು ಡಿಎಂಕೆ ನಾಯಕ ಕರುಣಾನಿಧಿ ಮೊಮ್ಮಗಳು ಅಂತ ಹೇಳ್ತಿದ್ದಾಳೆ. ಕರುಣಾನಿಧಿ ಅವರ ಹಿರಿಯ ಪುತ್ರ ಎಂ.ಕೆ. ಮುತ್ತು ಅವರ ಮಗಳು ತಾನು, ಆದ್ರೆ ಈ ವಿಚಾರವನ್ನು ಗುಪ್ತವಾಗಿ ಇಡಲಾಗಿತ್ತು ಅಂತಾ ಹೇಳಿರೋ ಮಹಿಳೆ, ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿದ್ದಾಳೆ.

ಈ ಮಹಿಳೆಯ ಹೆಸರು ಎಂ.ಕೆ.ಎಂ ಶೀಬಾ ರಾಣಿ. ಮುತ್ತು ಅವರ ಎರಡನೇ ಪತ್ನಿಯ ಮಗಳು ಎನ್ನುತ್ತಿದ್ದಾರೆ. 75 ವರ್ಷದ ತನ್ನ ತಂದೆ ಬದುಕಿದ್ದಾರೋ ಇಲ್ಲವೋ ಅನ್ನೋದೇ ಗೊತ್ತಿಲ್ಲ, ಅವರನ್ನು ಕೋರ್ಟ್ ಮುಂದೆ ಹಾಜರುಪಡಿಸಬೇಕು ಅಂತಾ ಒತ್ತಾಯಿಸಿದ್ದಾಳೆ.

ಮಲ ಸಹೋದರ ಅರಿವುನಿಧಿ ತನ್ನ ತಂದೆಯನ್ನು ಅಕ್ರಮವಾಗಿ ಬಂಧನದಲ್ಲಿರಿಸಿದ್ದಾನೆ ಅಂತಾನೂ ಆರೋಪಿಸಿದ್ದಾಳೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಆಯುಕ್ತರು ಹಾಗೂ ಅರಿವುನಿಧಿಗೆ ಕೋರ್ಟ್ ನೋಟಿಸ್ ಜಾರಿ ಮಾಡಿದೆ. ವಿಚಾರಣೆಯನ್ನು 2 ವಾರಗಳ ಕಾಲ ಮುಂದೂಡಿದೆ.

1988ರಲ್ಲಿ ಮುತ್ತು ತನ್ನ ತಾಯಿಯನ್ನು ಮದುವೆಯಾಗಿದ್ದಾರೆ. 1991ರಲ್ಲಿ ತಾನು ಜನಿಸಿದ್ದೆ ಅಂತಾ ಶೀಬಾ ರಾಣಿ ದೂರಿನಲ್ಲಿ ಉಲ್ಲೇಖಿಸಿದ್ದಾಳೆ. ತಂದೆಯನ್ನು ಭೇಟಿಯಾಗಲು 2015ರಲ್ಲೇ ಪೊಲೀಸರಿಗೆ ದೂರು ಕೊಟ್ಟಿದ್ದೆ. ಆದ್ರೆ ಅವರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...